ಪಲಿಮಾರು: ಯುಪಿಸಿಎಲ್‌ನಿಂದ ರಸ್ತೆ ಕಾಮಗಾರಿಗೆ ಚಾಲನೆ
Update: 2018-11-08 17:50 IST
ಪಡುಬಿದ್ರೆ, ನ.8: ಎಲ್ಲೂರು ಅದಾನಿ ಯುಪಿಸಿಎಲ್ ಸಂಸ್ಥೆಯ ವತಿಯಿಂದ ಸಿಎಸ್‌ಆರ್ ಯೋಜನೆಯಡಿ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಪಲಿಮಾರು ಗ್ರಾಪಂ ವ್ಯಾಪ್ತಿಯ ನಂದಿಕೂರು-ಬೆರಂದಿಕಟ್ಟೆ ಮತ್ತು ಶಾಂಭವಿ ನಗರ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಗೆ ಇಂದು ಚಾಲನೆ ನೀಡ ಲಾಯಿತು.
ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುಟ್ರಾಡೋ ಮತ್ತು ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಶಿಲಾನ್ಯಾಸ ನೆರವೇರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆರ್.ಸತೀಶ್, ಮಾಜಿ ಅಧ್ಯಕ್ಷರಾದ ಮಧುಕರ ಸುವರ್ಣ, ನವೀನಚಂದ್ರ ಸುವರ್ಣ, ತಾಪಂ ಸದಸ್ಯರಾದ ದಿನೇಶ್ ಕೋಟ್ಯಾನ್, ಗ್ರಾಪಂ ಸದಸ್ಯರಾದ ಗಾಯತ್ರಿ ಪ್ರಭು, ಶಿವರಾಮ ಪೂಜಾರಿ, ವಾಸುದೇವ, ಸತೀಶ್ ದೇವಾಡಿಗ, ಯುಪಿಸಿಎಲ್ ಸಂಸ್ಥೆಯ ಎಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ, ಅದಾನಿ ಫೌಂಡೇಷನ್‌ನ ಸದಸ್ಯರಾದ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.