ಸೋದೆ ಮಠದಿಂದ ಕೊರಗರ ಕಾಲನಿಯಲ್ಲಿ ದೀಪಾವಳಿ ಆಚರಣೆ

Update: 2018-11-08 14:00 GMT

ಹೆಬ್ರಿ, ನ.8: ಉಡುಪಿಯ ಶೀರೂರು ಮಠ ಮತ್ತು ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ವತಿಯಿಂದ ಸೋದೆ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿಯ ನಿರ್ದೇಶನದಂತೆ ಹೆಬ್ರಿ ಬಡಾಗುಡ್ಡೆಯ ಕೊರಗ ಸಮುದಾಯದ ಕಾಲನಿಯ ಎಲ್ಲ 250 ನಿವಾಸಿಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಟ್ಟೆ ಮತ್ತು ಊಟದ ತಟ್ಟೆಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶಾಸಕ ವಿ.ಸುನೀಲ್ ಕುಮಾರ್, ಮಾಜಿ ಶಾಸಕ ಕೆ.ಗೋಪಾಲ ಭಂಡಾರಿ, ಹೆಬ್ರಿ ಗ್ರಾಪಂ ಅಧ್ಯಕ್ಷ ಎಚ್.ಕೆ.ಸುಧಾಕರ, ಸದಸ್ಯ ಅಶೋಕ ಪ್ರಭು ಹಬ್ಬದ ಕೊಡುಗೆಗಳನ್ನು ಫಲಾನುಭವಿಗಳಿಗೆ ವಿತರಿಸಿದರು.

ಶ್ರೀಸೋದೆ ಮಠದ ದಿವಾನ ವೇದಮೂರ್ತಿ ಪಾಡಿಗಾರು ಶ್ರೀನಿವಾಸ ತಂತ್ರಿ ಅಧ್ಯಕ್ಷತೆ ವಹಿಸಿದ್ದರು.

ರತ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಎಸ್.ವಿ. ಭಟ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಪಂ ಸದಸ್ಯ ಕೊರಗ ಸಮುದಾಯದ ಮುಖಂಡ ಕೆ.ಪುತ್ರ ಕಾರ್ಯಕ್ರಮ ಸಂಘಟಿಸಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News