ಇಂಡೋನೇಶ್ಯ: ಇನ್ನೊಂದು ಲಯನ್ ಏರ್ ವಿಮಾನ ಕಂಬಕ್ಕೆ ಢಿಕ್ಕಿ

Update: 2018-11-08 15:31 GMT
ಸಾಂಧರ್ಭಿಕ ಚಿತ್ರ

ಜಕಾರ್ತ, ನ. 8: ಇಂಡೋನೇಶ್ಯದ ಮಿತವ್ಯಯ ವಿಮಾನಯಾನ ಸಂಸ್ಥೆ ಲಯನ್ ಏರ್‌ನ ವಿಮಾನವೊಂದು ಸಮುದ್ರದಲ್ಲಿ ಪತನಗೊಂಡ ಒಂದು ವಾರದ ಬಳಿಕ, ಅದೇ ಸಂಸ್ಥೆಯ ಇನ್ನೊಂದು ವಿಮಾನವು ಗುರುವಾರ ಸುಮಾತ್ರ ದ್ವೀಪದಲ್ಲಿ ಹಾರಾಟ ನಡೆಸುತ್ತಿದ್ದಾಗ ಕಂಬವೊಂದಕ್ಕೆ ಢಿಕ್ಕಿ ಹೊಡೆದಿದೆ.

ಕಳೆದ ವಾರದ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲ 189 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

ಗುರುವಾರ ನಡೆದ ಅಪಘಾತಕ್ಕೆ ವಿಮಾನ ನಿಲ್ದಾಣ ಸಿಬ್ಬಂದಿ ಕಾರಣ ಎಂದು ವಿಮಾನ ಯಾನ ಸಂಸ್ಥೆ ದೂರಿದೆ. ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ ಎಂದು ‘ಎಫೆ ನ್ಯೂಸ್’ ವರದಿ ಮಾಡಿದೆ.

ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಕರಿಂದ ನಮಗೆ ಕ್ಷಮಾಪಣಾ ಪತ್ರ ಬಂದಿದೆ ಎಂದು ಲಯನ್ ಏರ್ ವಕ್ತಾರರೊಬ್ಬರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News