ನೋಟ್ ಬ್ಯಾನ್ ನಂತರ ಆರ್ಥಿಕ ವ್ಯವಸ್ಥೆಯಲ್ಲಿ ಕರೆನ್ಸಿ ಪ್ರಮಾಣ ಹೆಚ್ಚಳ: ಆರ್ ಬಿಐ ಅಂಕಿಅಂಶಗಳು

Update: 2018-11-08 15:58 GMT

ಹೊಸದಿಲ್ಲಿ, ನ.8: ಎರಡು ವರ್ಷಗಳ ಹಿಂದೆ ನೋಟು ಅಮಾನ್ಯದ ಘೋಷಣೆಗೂ ಮೊದಲು ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಇದ್ದ ಕರೆನ್ಸಿಗಿಂತ ಈಗ ಇರುವ ಕರೆನ್ಸಿ ಪ್ರಮಾಣ ಹೆಚ್ಚಾಗಿದೆ ಎಂದು ಆರ್ ಬಿಐ ಡಾಟಾಗಳು ತೋರಿಸುತ್ತಿರುವುದಾಗಿ indiatoday.in ವರದಿ ಮಾಡಿದೆ.

ವರ್ಷ ಕಳೆದಂತೆ ಚಲಾವಣೆಯಲ್ಲಿರುವ ಕರೆನ್ಸಿ ಪ್ರಮಾಣ 22.2 ಶೇ.ದಷ್ಟು ಹೆಚ್ಚುತ್ತಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಇದು 2016ರಲ್ಲಿದ್ದ 17.7 ಶೇ.ಕ್ಕಿಂತ 4 ಶೇ. ಅಧಿಕ. ಇದೇ ಸಮಯ ಬ್ಯಾಂಕ್ ಟ್ರಾನ್ಸ್ ಫತ್ ಮತ್ತು ಡೆಬಿಟ್-ಕ್ರೆಡಿಟ್ ಕಾರ್ಡ್ ಪಾವತಿಯಂತಹ ಡಿಜಿಟಲ್ ಟ್ರಾನ್ಸಾಕ್ಷನ್ ಗಳು ನೋಟು ಅಮಾನ್ಯದ ನಂತರ ಹೆಚ್ಚಿರುವುದಾಗಿ ಅಂಕಿ ಅಂಶ ಹೇಳುತ್ತದೆ.

2 ವರ್ಷಗಳ ಹಿಂದೆ ಅಂದರೆ 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿಯವರು 500 ಮತ್ತು 1000 ರೂ. ನೋಟುಗಳನ್ನು ನಿಷೇಧಿಸುತ್ತಿರುವುದಾಗಿ ಘೋಷಿಸಿದ್ದರು.

2016ರ ನವೆಂಬರ್ 8ರ 14 ದಿನಗಳ ಮೊದಲು ಭಾರತದಲ್ಲಿ 17.01 ಲಕ್ಷ ಕೋಟಿ ನಗದು ಚಲಾವಣೆಯಲ್ಲಿದ್ದು, ನವೆಂಬರ್ 8 2018ರ 14 ದಿನಗಳ ಮೊದಲು ಈ ಪ್ರಮಾಣ 18.76 ಲಕ್ಷ ಕೋಟಿ ರೂ.ಗೆ ಹೆಚ್ಚಿರುವುದಾಗಿ ಆರ್ ಬಿಐ ಅಂಕಿ-ಅಂಶಗಳು ತಿಳಿಸುತ್ತಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News