ಬಿ.ಸಿ ರೋಡ್: ಯುನಿಟ್ ಕಾನ್ಫರೆನ್ಸ್, ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ

Update: 2018-11-08 16:22 GMT

ಬಂಟ್ವಾಳ,ನ.8: ಬಿಸಿರೋಡ್ ಎಸ್.ವೈ.ಎಸ್ ಮತ್ತು ಎಸ್ಸೆಸ್ಸೆಫ್ ವತಿಯಿಂದ ಯುನಿಟ್ ಕಾನ್ಫರೆನ್ಸ್ ಹಾಗೂ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ ಬಿ.ಸಿ ರೋಡಿನ ದ.ಕ ಜಿಲ್ಲಾ ಎಸ್ಸೆಸ್ಸೆಫ್ ಸಭಾಂಗಣದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷ ರಶೀದ್ ಹಾಜಿ ವಗ್ಗ, ಎಸ್.ವೈ.ಎಸ್ ಬಿ.ಸಿ ರೋಡ್ ನಾಯಕ ಎಸ್.ಎಮ್ ಬಶೀರ್ ಹಾಜಿ, ಇಬ್ರಾಹಿಂ ಪರ್ಲಿಯಾ, ಎಸ್ಸೆಸ್ಸೆಫ್ ಬಿ.ಸಿ ರೋಡ್ ಯುನಿಟ್ ಅಧ್ಯಕ್ಷ ಆಬಿದ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.

ಇಸ್ಮಾಯಿಲ್ ಕೆಎಸ್ಸಾರ್ಟಿಸಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಬಿ.ಸಿ ರೋಡ್ ಯುನಿಟ್ ಮೆಂಬರ್ಶಿಪ್ ಅಭಿಯಾನಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News