ಡಿ.3ರಂದು ಕನೆಕ್ಟ್-2018 ಸಾಮುದಾಯಿಕ ಸಮ್ಮಿಲನ: ಪೂರ್ವಸಿದ್ಧತಾ ಸಭೆ

Update: 2018-11-08 16:46 GMT

ಮಂಗಳೂರು, ನ.8: ಕರ್ನಾಟಕ ಕಲ್ಚರಲ್ ಫೌಂಡೇಶನ್, ಕರ್ನಾಟಕ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್, ಕರ್ನಾಟಕ ಸುನ್ನೀ ಯುವಜನ ಸಂಘದ ನೇತೃತ್ವದಲ್ಲಿ ಡಿಸೆಂಬರ್ 3ರಂದು ನಗರದ ನೆಹರೂ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನೊಳಗೊಂಡ ‘ಕನೆಕ್ಟ್-2018’ ಸಾಮುದಾಯಿಕ ಸಮ್ಮಿಲನ ಹಮ್ಮಿಕೊಳ್ಳಲಾಗಿದೆ.

ಇದರ ಯಶಸ್ಸಿಗೆ ಭರದ ಸಿದ್ಧತೆ ನಡೆಯುತ್ತಿದ್ದು, ವಿವಿಧ ಸುನ್ನೀ ಸಂಘಟನೆಗಳ ನಾಯಕರ ಸಭೆಯು ಗುರುವಾರ ಪಡೀಲ್‌ನ ಇಲ್ಮ್ ಸೆಂಟರ್‌ನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. 

ಸಭೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ ಉದ್ಘಾಟಿಸಿದರು. ಸುನ್ನೀ ಕೋ-ಆರ್ಡಿನೇಶನ್ ಸಮಿತಿಯ ಸಂಚಾಲಕ ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ನ ಅಧ್ಯಕ್ಷತೆ ವಹಿಸಿದ್ದರು.

‘ಕನೆಕ್ಟ್-2018’ ಕಾರ್ಯಕ್ರಮದಲ್ಲಿ ಹನ್ನೊಂದು ಜೋಡಿ ಬಡ ಹೆಣ್ಣುಮಕ್ಕಳ ವಿವಾಹ, ಎಸ್ಸೆಸ್ಸೆಫ್ ನೇತೃತ್ವದಲ್ಲಿ ಮೀಲಾದ್ ಜಾಥಾ ಹಾಗೂ ಎಸ್‌ವೈಎಸ್ ವತಿಯಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಡೆಯಲಿದೆ.

ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು, ಇಶಾರ ಸಂಪಾದಕ ಹಮೀದ್ ಬಜ್ಪೆ, ಕನಕ್ಟ್ -2018 ಪ್ರಧಾನ ಕಾರ್ಯದರ್ಶಿ ರಝಾಕ್ ಹಾಜಿ ನಾಟೆಕಲ್, ಎಸ್‌ಇಡಿಸಿ ರಾಜ್ಯಾಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯ ನಾಯಕ ಹಾಫಿಳ್ ಯಾಕೂಬ್ ಸಅದಿ, ನಾವೂರು ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಎಸ್‌ವೈಎಸ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಎಸ್‌ಎಂಎ ಪ್ರಧಾನ ಕಾರ್ಯದರ್ಶಿ ಖಲೀಲ್ ಮುಸ್ಲಿಯಾರ್ ಬೋಳಂತೂರು, ಎಸ್‌ವೈಎಸ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ರಝ್ವಿ, ವಿ.ಯು.ಇಸಾಕ್ ಝುಹ್ರಿ ಸೂರಿಂಜೆ, ಕೆಸಿಎಫ್ ಸೌದಿ ಅರೇಬಿಯಾದ ಸಲೀಂ ಕನ್ಯಾಡಿ, ನಝೀರ್ ಹಾಜಿ ಕಾಶಿಪಟ್ನ, ಕೆಸಿಎಫ್ ಅಜ್ಮಾನ್‌ನ ಅಬೂಬಕರ್ ಮದನಿ, ದುಬೈ ಕೆಸಿಎಫ್‌ನ ಎನ್.ಕೆ.ಸಿದ್ದೀಕ್ ಅಳಿಕೆ, ನಾಸಿರ್ ಗಾಳಿಮುಖ, ಅಬ್ದುಲ್ ರಹಿಮಾನ್ ಪ್ರಿಂಟೆಕ್ ಕೃಷ್ಣಾಪುರ, ಇಸ್ಮಾಯೀಲ್ ಮಾಸ್ಟರ್ ಮಂಗಿಲಪದವು ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News