ಉಪ್ಪಿನಂಗಡಿಯಲ್ಲಿ 'ಸುನ್ನೀ ಆದರ್ಶ ಸಮ್ಮೇಳನ'

Update: 2018-11-08 17:18 GMT

ಉಪ್ಪಿನಂಗಡಿ, ನ.8: ನೈಜ ಸುನ್ನೀ ಆದರ್ಶಗಳನ್ನು ಎತ್ತಿ ಹಿಡಿಯಲು ಸಂಘಟನಾತ್ಮಕ ವೇದಿಕೆ ಸನ್ನದ್ಧವಾಗಿದೆ. ಯುವ ಸಮೂಹ ಈ ನಿಟ್ಟಿನಲ್ಲಿ ಉತ್ಸುಕರಾಗಬೇಕು ಎಂದು ಬೆಳ್ತಂಗಡಿ ದಾರುಸ್ಸಲಾಂ ಎಜುಕೇಶನ್ ಸೆಂಟರ್ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಹೇಳಿದರು.

 ಉಪ್ಪಿನಂಗಡಿ ಎಚ್.ಎಂ. ಹಾಲ್ ಮೈದಾನದಲ್ಲಿ ನಡೆದ ಬೆಳ್ತಂಗಡಿ ದಾರುಸ್ಸಲಾಂ ಎಜುಕೇಶನ್ ಸೆಂಟರ್ ಇದರ 2ನೇ ವಾರ್ಷಿಕೋತ್ಸವ ಹಾಗೂ ಶಂಸುಲ್ ಉಲಮಾರವರ ಆಂಡ್ ನೇರ್ಚೆ ಪ್ರಚಾರ ನಿಮಿತ್ತದ 'ಸುನ್ನೀ ಆದರ್ಶ ಸಮ್ಮೇಳನ'ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಮುದರ್ರಿಸ್ ಅಬ್ದುಸ್ಸಲಾಂ ಫೈಝಿ ಎಡಪ್ಪಾಲ ಸಮ್ಮೇಳನ ಉದ್ಘಾಟಿಸಿದರು.
 ಸಂಶಯ ನಿವಾರಣೆ, ಸಂವಾದ ಕಾರ್ಯಕ್ರಮದಲ್ಲಿ ಸಮಸ್ತ ಇಸ್ತಿಖಾಮ ಸಮಿತಿಯ ಅಧ್ಯಕ್ಷ ಎಂ.ಟಿ.ಅಬೂಬಕರ್ ದಾರಿಮಿ ಮಾತನಾಡಿದರು.

 ಸಮಸ್ತ ಇಸ್ತಿಖಾಮ ಸಮಿತಿಯ ಸದಸ್ಯರಾದ ಸಿ.ಕೆ.ಮೊಯ್ದಿನ್ ಫೈಝಿ, ಅಮೀರ್ ಹುಸೈನ್ ಹುದವಿ, ಪಯ್ಯಕ್ಕಿ ಉಸ್ತಾದ್ ಅಕಾಡೆಮಿ ಪ್ರೊಫೆಸರ್ ರಫೀಕ್ ಬಾಖವಿ ಮಠ, ಜಂಇಯ್ಯತುಲ್ ಮುಅಲ್ಲಿಮೀನ್ ಉಪ್ಪಿನಂಗಡಿ ರೇಂಜ್ ಅಧ್ಯಕ್ಷ ಇಬ್ರಾಹೀಂ ದಾರಿಮಿ, ಕರಾಯ ಮಸೀದಿಯ ಮುದರ್ರಿಸ್ ಕೆ.ಎಸ್.ಹೈದರ್ ದಾರಿಮಿ, ಮುಲ್ಕಿ ಮಸೀದಿಯ ಮುದರ್ರಿಸ್ ಎಸ್.ಬಿ. ಮುಹಮ್ಮದ್ ದಾರಿಮಿ, ಕಕ್ಕಿಂಜೆ ಮಸೀದಿ ಮುದರ್ರಿಸ್ ಮೂಸಾ ದಾರಿಮಿ ಮಾತನಾಡಿದರು.
 
 ಸಭಾ ಕಾಯಕ್ರಮಕ್ಕೆ ಮುನ್ನ ಆತೂರು ಬದ್ರಿಯಾ ಜಮಾ ಮಸೀದಿಯ ಮುದರ್ರಿಸ್ ಸೈಯದ್ ಜುನೈದ್ ಜಿಫ್ರಿ ತಂಙಳ್ ನೇತೃತ್ವದಲ್ಲಿ ಮಜ್ಲಿಸುನ್ನೂರು ಕಾರ್ಯಕ್ರಮ ನಡೆಯಿತು.

ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಸೈಯದ್ ಹಾದಿ ಅನಸ್ ತಂಙಳ್ ದುಆ ನೆರವೇರಿಸಿದರು. ಅಶ್ರಫ್ ಫಾಝಿಲ್ ಬಾಖವಿ, ಶರೀಫ್ ಫೈಝಿ ಕಡಬ, ನಝೀರ್ ಅಝ್‌ಹರಿ, ಇಸ್ಮಾಯೀಲ್ ಫೈಝಿ ಕರಾಯ, ರಿಯಾಝ್ ಫೈಝಿ ಕಕ್ಕಿಂಜೆ, ಅಲಿ ತಂಙಳ್ ಕರಾವಳಿ, ಅಬ್ದುಲ್ ಖಾದರ್ ಮಾಸ್ಟರ್, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಹನೀಫ್ ಹಾಜಿ ಪುತ್ತೂರು, ಹಸನಬ್ಬ ಚಾರ್ಮಾಡಿ, ಬಶೀರ್ ದಾರಿಮಿ, ಅಬ್ದುಲ್ ರಹಿಮಾನ್ ಹಾಜಿ ಕೊಳ್ಳೇಜಾಲ್, ಯೂಸುಫ್ ಹಾಜಿ ಪೆದಮಲೆ ಮೊದಲಾದವರು ಉಪಸ್ಥಿತರಿದ್ದರು.

ಸುನ್ನೀ ಆದರ್ಶ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಮುಸ್ತಫ ಕೆಂಪಿ ಸ್ವಾಗತಿಸಿದರು. ಕೆ.ಎಂ.ಎಸ್.ಫೈಝಿ ಕರಾಯ ವಂದಿಸಿದರು. ಉಪ್ಪಿನಂಗಡಿ ಹಿಫ್ಲ್ ಕಾಲೇಜಿನ ಪ್ರಾಚಾರ್ಯ ಹಾಫಿಲ್ ತ್ವಹಿಬ್ ಅಲ್‌ಖಾಸಿಮಿ ಕಿರಾಅತ್ ಪಠಿಸಿದರು.

ವಿವಿಧ ಸಂಘಟನೆ ಪದಾಧಿಕಾರಿಗಳಾದ ಅಶ್ರಫ್ ಹಾಜಿ ಪೆದಮಲೆ, ಅಬ್ದುರ್ರಝಾಕ್ ದಾರಿಮಿ ನೀರಾಜೆ, ಅಶ್ರಫ್ ಹನೀಫಿ, ಇಸ್ಮಾಯೀಲ್ ತಂಙಳ್, ಝಕರಿಯಾ ಮುಸ್ಲಿಯಾರ್, ಮುಹಮ್ಮದ್ ಕೂಟೇಲ್ ವಿವಿಧ ಕಾಯಕ್ರಮ ನಿರ್ವಹಿಸಿದರು. ಇಸಾಕ್ ಕೌಸರಿ ಕಾಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News