3 ಲಕ್ಷ ಕೋಟಿ ರೂ. ಕಪ್ಪುಹಣ ಹೊರತೆಗೆಯುತ್ತೇನೆ ಎಂದ ಮೋದಿ ಆ ಮೊತ್ತವನ್ನು ಆರ್ ಬಿಐನಿಂದ ಕೇಳುತ್ತಿದ್ದಾರೆ

Update: 2018-11-08 17:30 GMT

ಹೊಸದಿಲ್ಲಿ, ನ.8: ನೋಟ್ ಬ್ಯಾನ್ ಮೂಲಕ 3 ಲಕ್ಷ ಕೋಟಿ ರೂ. ಕಪ್ಪು ಹಣ ಹೊರತೆಗೆಯುವುದಾಗಿ ಹೇಳಿದ್ದ ಪ್ರಧಾನಿ ಮೋದಿಯವರು ಇದೀಗ ಆರ್ ಬಿಐನಿಂದ 3 ಲಕ್ಷ ಕೋಟಿ ರೂ.ಗಳನ್ನು ಕೇಳುತ್ತಿದ್ದಾರೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಅಮಾನ್ಯಗೊಂಡು ಇಂದಿಗೆ 2 ವರ್ಷಗಳಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಭೂಷಣ್, “ಮೋದಿಜಿ, ನೋಟ್ ಬ್ಯಾನ್ ಮೂಲಕ ಹೊರತೆಗೆದ 3 ಲಕ್ಷ ಕೋಟಿ ರೂ. ಕಪ್ಪು ಹಣವನ್ನು ತೋರಿಸಲು ನೀವು ಕೇಳಿದ್ದ 50 ದಿನಗಳ ಬದಲಾಗಿ ನಾವು ನಿಮಗೆ 700 ದಿನಗಳನ್ನು ನೀಡಿದ್ದೇವೆ. ಇದೀಗ ನೀವು ಆರ್ ಬಿಐನಿಂದ 3 ಲಕ್ಷ ಕೋಟಿ ರೂ.ಗಳನ್ನು ಕೇಳುತ್ತಿದ್ದೀರಿ. ಈಗಲೂ ನಾವು ನಿಮ್ಮನ್ನು ದಹಿಸುವುದಿಲ್ಲ” ಎಂದಿದ್ದಾರೆ.

ನೋಟು ಅಮಾನ್ಯಗೊಂಡು ಇಂದಿಗೆ 2 ವರ್ಷಗಳಾಗಿದ್ದು, ವಿಪಕ್ಷಗಳು ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿವೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News