ಜಮ್ಮು ಕಾಶ್ಮೀರ: 250 ಕೋ. ರೂ. ಮೌಲ್ಯದ ಹೆರಾಯಿನ್ ವಶ

Update: 2018-11-08 17:37 GMT

ಜಮ್ಮು, ನ. 8: ಜಮ್ಮು ಹಾಗೂ ಕಾಶ್ಮೀರದ ರಂಬಾನ್ ಜಿಲ್ಲೆಯಲ್ಲಿ ಟ್ರಕ್ಕೊಂದರಲ್ಲಿ ಸಾಗಿಸುತ್ತಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 250 ಕೋ. ರೂ. ಅಂದಾಜು ಮೌಲ್ಯದ 50 ಕಿ. ಗ್ರಾಂ. ಹೆರಾಯಿನ್ ಅನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೊ (ಎನ್‌ಸಿಬಿ) ವಶಪಡಿಸಿಕೊಂಡಿದೆ.

 ಟ್ರಕ್ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಿಂದ ದಿಲ್ಲಿಗೆ ತೆರಳುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಎನ್‌ಸಿಬಿ ಅಧಿಕಾರಿಗಳು ಜಮ್ಮು ಸಮೀಪದ ಟೋಲ್ ಪ್ಲಾಝಾದಲ್ಲಿ ಅದನ್ನು ತಡೆ ಹಿಡಿದರು ಎಂದು ಎನ್‌ಸಿಬಿ ವಲಯ ನಿರ್ದೇಶಕ ವಿರೇಂದರ್ ಯಾದವ್ ತಿಳಿಸಿದ್ದಾರೆ.

 ಟ್ರಕ್ ಅನ್ನು ಪರಿಶೀಲಿಸುವಾಗ ಆ್ಯಪಲ್ ಕ್ರೇಟ್ಸ್‌ನ ಅಡಿಯಲ್ಲಿ 50 ಹೆರಾಯಿನ್ ಪೌಚ್‌ಗಳು ಪತ್ತೆಯಾದವು. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹೆರಾಯಿನ್‌ನ ಒಟ್ಟು ವೌಲ್ಯ 250 ಕೋ. ರೂ. ಎಂದು ಅವರು ಹೇಳಿದ್ದಾರೆ. ಜಮ್ಮುವಿನಲ್ಲಿ ಈ ಒಂದು ವರ್ಷದಲ್ಲಿ 800 ಕೋ. ರೂ. ಮೌಲ್ಯದ 161 ಕಿ.ಗ್ರಾಂ. ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News