ನ.16: ಪ್ರವಾದಿ ನಿಂದನೆ ವಿರುದ್ಧ ಪ್ರತಿಭಟನೆ
Update: 2018-11-09 18:15 IST
ಮಂಗಳೂರು, ನ.9: ಕೊಡಗಿನ ಗೋಣಿ ಕೊಪ್ಪಲುವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಸಂತೋಷ ತಮ್ಮಯ್ಯ ಎಂಬ ಅಂಕಣಕಾರರೊಬ್ಬರು ಪ್ರವಾದಿ ಮುಹಮ್ಮದ್ ಅವರ ಜೀವನವನ್ನು ಪ್ರಸ್ತಾಪಿಸಿ ಪ್ರವಾದಿ ಮುಹಮ್ಮದರು ಧಾರ್ಮಿಕ ಭಯೋತ್ಪಾದನೆಗೆ ಉತ್ತೇಜಿಸಿರುವುದಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದನ್ನು ಖಂಡಿಸಿ ಮತ್ತು ಸೂಕ್ತ ಕಾನೂನು ಕ್ರಮ ಜರಗಿಸುವಂತೆ ನ.16ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಆಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.