ವಂದೇ ಮಾತರಂನಲ್ಲಿ ವಿಶ್ವದಾಖಲೆಯ ಕಾರ್ಯಕ್ರಮ
ಉಡುಪಿ, ನ.9: ಉಡುಪಿ ಸಂವೇದನಾ ಫೌಂಡೇಶನ್ ವತಿಯಿಂದ ಸ್ವಾಮಿ ವಿವೇಕಾನಂದರ 156ನೆ ಜನ್ಮದಿನದ ಪ್ರಯುಕ್ತ ಅತ್ಯಂತ ಹೆಚ್ಚು ಬಾರಿ ಅಂದರೆ 15ಸಾವಿರಕ್ಕೂ ಅಧಿಕ ವೃತ್ತಿಪರ ಸಂಗೀತಗಾರರಿಂದ ಸಾವಿರಾರು ರೀತಿಯಲ್ಲಿ ರಾಗ ದೃಶ್ಯ ಸಂಯೋಜನೆಗೊಳ್ಳುವ ಮೂಲಕ ವಂದೇ ಮಾತರಂನಲ್ಲಿ ವಿಶ್ವ ದಾಖಲೆಯ ಕಾರ್ಯಕ್ರಮವನ್ನು ಮಲ್ಪೆ ಕಡಲ ಕಿನಾರೆಯಲ್ಲಿ ಜ.12ರಂದು ಹಮ್ಮಿಕೊಳ್ಳಲಾಗಿದೆ.
ಸುಮಾರು 15 ಸಾವಿರಕ್ಕೂ ಅಧಿಕ ಆಯಾ ರಾಜ್ಯಗಳ ವೃತ್ತಿ ನಿರತ ಗಾಯಕ ಗಾಯಕಿಯರು ವಂದೇಮಾತರಂಗೆ ವಿಭಿನ್ನ ರಾಗ ಸಂಯೋಜನೆ ಮಾಡಿ ತಮ್ಮ ರಾಜ್ಯದ ಪ್ರಕೃತಿ, ಸಂಸ್ಕೃತಿಗಳು ಪ್ರಕಟಗೊಳ್ಳುವ ರೀತಿಯಲ್ಲಿ ಹಾಡನ್ನು ಚಿತ್ರೀಕರಿಸ ಲಿದ್ದಾರೆ. ಈ ಎಲ್ಲ ಹಾಡಿನ ವಿಡಿಯೋಗಳನ್ನು ನಿರ್ದೇಶಕರು, ಸಂಗೀತ ನಿರ್ದೇ ಶಕರುಗಳನ್ನು ಒಳಗೊಂಡ ತೀರ್ಪುಗಾರರ ತಂಡ ವೀಕ್ಷಿಸಿ ದೇಶಾದ್ಯಂತ ಒಟ್ಟು 100 ಉತ್ಕೃಷ್ಟ ಪ್ರಸ್ತುತಿಗಳನ್ನು ಆಯ್ಕೆ ಮಾಡಲಿದೆ ಎಂದು ಪ್ರಕಾಶ್ ಮಲ್ಪೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಆಯ್ಕೆಗೊಂಡ ಪ್ರಸ್ತುತಿಯ ಗಾಯಕರು ಕಾರ್ಯಕ್ರಮದ ದಿನ ತಮ್ಮ ರಾಜ್ಯದ ಸಾಂಪ್ರದಾಯಿಕ ಉಡುಗೆತೊಡುಗೆಗಳೊಂದಿಗೆ ಶೋಭಯಾತ್ರೆಯಲ್ಲಿ ಭಾಗವಹಿ ಸಲಿರುವರು. ಅಲ್ಲದೆ ರಾಷ್ಟ್ರೀಯ ನಾಯಕರು, ಬಾಲಿವುಡ್ ನಟರು, ಸಂಗೀತ ನಿರ್ದೇಶಕರು ಸೇರಿದಂತೆ 50ಸಾವಿರ ಮಂದಿ ಪಾಲ್ಗೊಳ್ಳಲಿ ರುವರು. ಉತ್ಕೃಷ್ಟ ಮೊದಲ ಪ್ರಸ್ತುತಿಗೆ 2ಲಕ್ಷ ರೂ. ಮತ್ತು ಪ್ರಶಸ್ತಿ ಫಲಕ, ದ್ವಿತೀಯ ಪ್ರಸ್ತುತಿಗೆ 1ಲಕ್ಷ ರೂ. ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು ಎಂದರು.
ಇದಕ್ಕಾಗಿ ನೋಂದಣಿ ನ.15ರಿಂದ ಪ್ರಾರಂಭಗೊಳ್ಳಲಿದ್ದು, ಮಾಹಿತಿ ಮತ್ತು ನೊಂದಣಿಗಾಗಿ ವೆಬ್‌ಸೈಟ್ http://samvedanafoundationudupi. org ಮತ್ತು ಮೊಬೈಲ್ -9964677679, 7899768035, 97432 88584ನ್ನು ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಸುಜಿತ್ ಶೆಟ್ಟಿ, ರಾಕೇಶ್ ಕರ್ಕೇರ, ನಿಖಿಲ್ ಸಾಲ್ಯಾನ್, ಯೋಗೇಶ್ ಬಂಗೇರ ಉಪಸ್ಥಿತರಿದ್ದರು.