ಉಡುಪಿ: ರಾಜ್ಯ ಕರಾಟೆಯಲ್ಲಿ ರಿತೇಶ್‌ಗೆ 2 ಚಿನ್ನ
Update: 2018-11-09 19:50 IST
ಉಡುಪಿ, ನ.9: ಉಡುಪಿಯ ಬುಡೋಕಾನ್ ಕರಾಟೆ ಸಂಸ್ಥೆಯ ವತಿಯಿಂದ ಕೃಷ್ಣ ಮಠದ ರಾಜಾಂಗಣದಲ್ಲಿ ಇತ್ತೀಚೆಗೆ ನಡೆದ 3ನೇ ರಾಜ್ಯ ಮಟ್ಟದ ಅಂತರ್ ಶಾಖಾ ಬುಡೋಕಾನ್ ಕರಾಟೆ ಮತ್ತು ಸೆಲ್ಫ್ ಢಿಫೆನ್ಸ್ ಸ್ಪರ್ಧಾಕೂಟದಲ್ಲಿ ಉಡುಪಿಯ ಕ್ರಿಶ್ಚಿಯನ್ ಪ್ರೌಢಶಾಲೆಯ 6ನೇ ತರಗತಿಯ ವಿದ್ಯಾರ್ಥಿ ರಿತೇಶ್ ಜೆ. ಶೆಟ್ಟಿ ಕಟಾ ಮತ್ತು ಕುಮಿಟೆ ವಿಭಾಗಗಳೆರಡರಲ್ಲೂ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾನೆ.
ಈತ ಉಡುಪಿ ಕಲ್ಮಂಜೆಯ ಗೋವಿಂದ ಶೆಟ್ಟಿ ಮತ್ತು ಗೀತಾ ಜೆ. ಶೆಟ್ಟಿ ದಂಪತಿಗಳ ಪುತ್ರ. ಕರಾಟೆ ಗುರು ದಯಾನಂದ ಆಚಾರ್ಯ ಅವರಲ್ಲಿ ತರಬೇತಿ ಪಡೆಯುತ್ತಿದ್ದಾನೆ.