×
Ad

ಪ್ರವಾದಿ ನಿಂದನೆ: ಸಂತೋಷ್ ತಮ್ಮಯ್ಯನನ್ನು ಬಂಧಿಸುವಂತೆ ಒತ್ತಾಯಿಸಿ ಮನವಿ

Update: 2018-11-09 20:17 IST

ಬಂಟ್ವಾಳ, ನ. 9: ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದ ಸಂತೋಷ್ ತಮ್ಮಯ್ಯ ಗೋಣಿಕೊಪ್ಪ ಎಂಬಾತನನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಕೆಪಿಸಿಸಿ ಕಾರ್ಮಿಕ ಘಟಕದ ಉಪಾಧ್ಯಕ್ಷ ಅಮೀರ್ ತುಂಬೆ ಅವರ ನೇತೃತ್ವದಲ್ಲಿ ಶುಕ್ರವಾರ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರವಾದಿ ಮುಹಮ್ಮದ್ ಅವರು ವಿಶ್ವವೇ ಮೆಚ್ಚಿದ ನಾಯಕರಾಗಿರುತ್ತಾರೆ. ಮುಸ್ಲಿಮರ ಪ್ರೀತಿಯ ನಾಯಕರಾಗಿದ್ದು, ಅವರ ವಿರುದ್ಧ ಅವಹೇಳಕಾರಿ ನಿಂದಿಸಿದಿರಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ. ಇದರಿಂದ ಮುಸ್ಲಿಂ ಸಮುದಾಯ ಭಾವನೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಸಂತೋಷ್ ತಮ್ಮಯ್ಯ ನನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರಗಿಸುವಂತೆ ಪೊಲೀಸ್ ದೂರಿನಲ್ಲಿ ಒತ್ತಾಯಿಸಲಾಗಿದೆ. 

ಈ ಸಂಧರ್ಭ ಮುಹಮ್ಮದ್ ನಂದಾವರ, ಕೇರಿಂ ಬೊಳ್ಳಾಯಿ, ಜಲೀಲ್, ಕಾರಾಜೆ ಸುಲೈಮಾನ್, ಮಜೀದ್, ಕಮಾಲ್ ವಳವೂರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News