×
Ad

ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಸೆರೆ: ಏಳು ಕೆ.ಜಿ. ಗಾಂಜಾ ವಶ

Update: 2018-11-09 20:19 IST

ಮಂಗಳೂರು, ನ.9: ನಗರದ ಕೋಡಿಕಲ್ ಕ್ರಾಸ್ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳ ಸಹಿತ ಏಳು ಕೆ.ಜಿ. ಗಾಂಜಾವನ್ನು ನಗರ ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯ ರಾಮದುರ್ಗಾ ತಾಲೂಕಿನ ತೋರಣಗಟ್ಟಿ ನಿವಾಸಿ ಕರೆಪ್ಪ ಲಕ್ಷ್ಮಣ ಸುಣದೋಳಿ (50), ಬಿಜಾಪುರ ಮಾಸೆತ್ತಿ ಗಂಗಪ್ಪ ಪಡೆಪ್ಪ ಮಾದೆರ (39), ಬೆಳಗಾವಿ ಕಾನಸಗೇರಿ ನಿವಾಸಿ ಸಿದ್ದರಾಯಪ್ಪ ಕೂರಿ(36) ಬಂಧಿತ ಆರೋಪಿಗಳು.

ಆರೋಪಿಗಳು ನ.9ರಂದು ವಿಜಯಪುರದಿಂದ ಕಾಸರಗೋಡಿಗೆ ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದರು. ಈ ಬಗ್ಗೆ ಪೊಲೀಸರು ಮಾಹಿತಿ ಆಧಾರದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು ಏಳು ಕೆ.ಜಿ 100 ಗ್ರಾಂ ಗಾಂಜಾ, 3 ಮೊಬೈಲ್ , 2 ಬೈಕ್‌ಗಳು, 315 ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,13,315 ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ಭಾಸ್ಕರ್ ಮಾರ್ಗದರ್ಶನ ದಂತೆ ಕೇಂದ್ರ ರೌಡಿ ನಿಗ್ರಹದಳದ ಪೊಲೀಸ್ ನಿರೀಕ್ಷಕ ರವೀಶ್ ಎಸ್. ನಾಯಕ್, ಸಿಬ್ಬಂದಿ ವೆಲೆಂಟೀನ್ ಡಿಸೋಜ, ಗಂಗಾಧರ್, ಸಂತೋಷ್ ಸಸಿಹಿತ್ಲು, ಕಿಶೋರ್, ಪ್ರಮೋದ್ ಕುಮಾರ್, ಬಸವರಾಜ ಮತ್ತು ಉರ್ವ ಠಾಣೆಯ ಪೊಲೀಸ್ ಎಸ್ಸೈ ವನಜಾಕ್ಷಿ ಕೆ. ಸಿಬ್ಬಂದಿ ಬಾಲಕೃಷ್ಣ ಕೆ., ಸಂತೋಷ್, ರವಿ ಡಿ., ವಿನೋದ್, ಯೋಗೀಶ್, ಹೇಮಂತ್‌ಕುಮಾರ್, ಶಂಕರಪ್ಪ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News