×
Ad

ತಂಡದಿಂದ ಯುವಕನ ಕೊಲೆಯತ್ನ: ದೂರು

Update: 2018-11-09 21:51 IST

ಉಡುಪಿ, ನ.9: ಕ್ಷುಲ್ಲಕ ಕಾರಣಕ್ಕಾಗಿ ತಂಡವೊಂದು ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ದೊಡ್ಡಣಗುಡ್ಡೆ ಎಂಬಲ್ಲಿ ನ.8ರಂದು ರಾತ್ರಿ 8:30ರ ಸುಮಾರಿಗೆ ನಡೆದಿದೆ.

ಹಲ್ಲೆಗೊಳಗಾಗಿರುವ ದೊಡ್ಡಣಗುಡ್ಡೆ ಕರಂಬಳ್ಳಿ ಜನತಾ ಕಾಲನಿಯ ಭಾಸ್ಕರ ದೇವಾಡಿಗ ಎಂಬವರ ಮಗ ಶರತ್ ದೇವಾಡಿಗ(24) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರು ತನ್ನ ಸ್ನೇಹಿತರೊಂದಿಗೆ ನಿಂತಿದ್ದಾಗ ಅಲ್ಲಿಗೆ ಬಂದ ದೀಪಕ್, ಸನಿಲ್, ಸಾಗರ್, ಚರಣ್, ನಿತೇಶ್, ರಕ್ಷಿತ್ ಎಂಬವರು ಕೊಲೆ ಮಾಡುವ ಉದ್ದೇಶದಿಂದ ಶರತ್ ದೇವಾಡಿಗರಿಗೆ ಚಾಕು ಹಾಗೂ ಕೋಳಿ ಬಾಳುವಿನಿಂದ ಮಾರಣಾಂತಿಕ ಹಲ್ಲೆ ಮಾಡಿ ರಕ್ತಗಾಯಗೊಳಿಸಿದ್ದಲ್ಲದೆ ಜೀವ ಬೆದರಿಕೆಯೊಡ್ಡಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News