ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ತೆಲಂಗಾಣದಲ್ಲಿ ಈ ಪಕ್ಷಕ್ಕೆ ಸಿಗಲಿದೆ ಅಧಿಕಾರ

Update: 2018-11-09 16:27 GMT

ಹೊಸದಿಲ್ಲಿ, ನ.9: ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯ ಗಳಿಸಲಿದೆ ಎಂದು ಸಿ-ವೋಟರ್ ಸಮೀಕ್ಷೆ ತಿಳಿಸಿದೆ. ಆದರೆ ಮಿಝೋರಾಂ ಮತ್ತು ಛತ್ತೀಸ್ ಗಢದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗುವ ಬಗ್ಗೆ ಸಮೀಕ್ಷೆಯಲ್ಲಿ ತಿಳಿದುಬಂದಿಲ್ಲ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು 145 ಸೀಟುಗಳಲ್ಲಿ ಜಯ ಗಳಿಸಲಿದೆ ಎಂದು ಸಿ-ವೋಟರ್ ಸಮೀಕ್ಷೆ ತಿಳಿಸಿದ್ದು, ರಾಜ್ಯದಲ್ಲಿ ಸಿಎಂ ವಸುಂಧರಾ ರಾಜೆ ವಿರೋಧಿ ಅಲೆ ಇದಕ್ಕೆ ಕಾರಣ ಎಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ 47.9 ಶೇಕಡಾವಾರು ಮತಗಳೊಂದಿಗೆ ಜಯಭೇರಿ ಬಾರಿಸಲಿದ್ದರೆ, ಬಿಜೆಪಿ 39.7 ಶೇ.ದೊಂದಿಗೆ 45 ಸೀಟುಗಳನ್ನು ಮಾತ್ರ ಗೆಲ್ಲಲಿದೆ ಎಂದಿದೆ.

15 ವರ್ಷಗಳ ನಂತರ ಕಾಂಗ್ರೆಸ್ ಮಧ್ಯ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ತಿಳಿಸಿದೆ. 166 ಸೀಟುಗಳಿಂದ ಬಿಜೆಪಿ 107 ಸೀಟುಗಳಿಗೆ ಇಳಿಯಲಿದೆ ಹಾಗು ಕಾಂಗ್ರೆಸ್ 116 ಸೀಟುಗಳನ್ನು ಜಯಿಸಲಿದೆ ಎಂದಿದೆ.

ತೆಲಂಗಾಣದಲ್ಲೂ ಕಾಂಗ್ರೆಸ್-ಟಿಡಿಪಿ ಮೈತ್ರಿಗೆ 64 ಸೀಟುಗಳೊಂದಿಗೆ ಬಹುಮತ ಖಚಿತ ಎಂದು ಸಮೀಕ್ಷೆ ತಿಳಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ 94 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಟಿಡಿಪಿ 14 ಸೀಟುಗಳಲ್ಲಿ ಸ್ಪರ್ಧಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News