ಮ್ಯಾನ್ಮಾರ್‌ನಲ್ಲಿ ಬಂದರು ನಿರ್ಮಿಸಲಿರುವ ಚೀನಾ

Update: 2018-11-09 17:03 GMT

ಬೀಜಿಂಗ್, ನ. 9: ಮ್ಯಾನ್ಮಾರ್‌ನ ಕ್ಯಾವುಕ್‌ಪ್ಯು ಪಟ್ಟಣದಲ್ಲಿ ಬಂಗಾಳ ಕೊಲ್ಲಿಯಲ್ಲಿ ಬೃಹತ್ ಆಳ ಸಮುದ್ರ ಬಂದರನ್ನು ಚೀನಾ ನಿರ್ಮಿಸಲಿದೆ.

ಇದು ಭಾರತಕ್ಕೆ ಕಳವಳಕಾರಿ ಸುದ್ದಿಯಾಗಿದೆ. ಭಾರತದ ಸುತ್ತ ಈಗಾಗಲೇ ಎರಡು ಚೀನಾ ನಿರ್ಮಿತ ಬಂದರುಗಳಿವೆ.

ಚೀನಾದ ‘ಬೆಲ್ಟ್ ಮತ್ತು ರೋಡ್’ ಯೋಜನೆಯ ಭಾಗವಾಗಿ ಬಂದರು ನಿರ್ಮಿಸುವ ಒಪ್ಪಂದಕ್ಕೆ ಚೀನಾ ಮತ್ತು ಮ್ಯಾನ್ಮಾರ್ ಗುರುವಾರ ಸಹಿ ಹಾಕಿವೆ.

ಹಣ ಹೂಡುವ ವಿಚಾರದಲ್ಲಿ ಯೋಜನೆಯ ಕುರಿತ ಮಾತುಕತೆ ಹಲವು ವರ್ಷಗಳಿಂದ ಸ್ಥಗಿತಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News