×
Ad

ಮಂಗಳೂರು: ಶಕ್ತಿ ಶಿಕ್ಷಣ ಸಂಸ್ಥೆಗೆ ಶಿಕ್ಷಣ ತಜ್ಞರ ಭೇಟಿ

Update: 2018-11-10 19:14 IST

ಮಂಗಳೂರು, ನ.10: ಶಕ್ತಿನಗರದ ಶಕ್ತಿ ವಸತಿಯುತ ಶಾಲೆ ಹಾಗೂ ಶಕ್ತಿ ಪ.ಪೂ. ಕಾಲೇಜಿಗೆ ಹೊಸದಿಲ್ಲಿ, ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟಣೆಯ ಪ್ರಮುಖರು ಇತ್ತೀಚೆಗೆ ಭೇಟಿ ನೀಡಿ ಶಾಲೆಯ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿದರು.

ಶಿಕ್ಷಣ ತಜ್ಞರಾದ ವಿದ್ಯಾಭಾರತಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಿ.ಆರ್.ಜಗದೀಶ್ ಮಾತನಾಡಿ ‘ಶಿಕ್ಷಣ ಸಂಸ್ಥೆ ಹೇಗೆ ಬೆಳೆಯಬಹುದು ಎಂಬುವುದು ಆ ಶಾಲೆಯ ಶೌಚಾಲಯ, ತರಗತಿ ಕೊಠಡಿಗಳಿಗೆ ಬೆಳಕು ಹಾಗೂ ಗಾಳಿಯ ವ್ಯವಸ್ಥೆ, ಉಪನ್ಯಾಸಕರ ಕೊಠಡಿ, ಮೈದಾನ, ಗ್ರಂಥಾಲಯ, ವಸತಿ ನಿಲಯ, ಅಡುಗೆ ಕೋಣೆ ಗಮನಿಸಿದಾಗ ತಿಳಿಯುತ್ತದೆ. ಆ ಎಲ್ಲಾ ವ್ಯವಸ್ಥೆಯು ಶಕ್ತಿ ಶಾಲೆಯಲ್ಲಿದೆ ಎಂದರು.

ಭಾರತೀಯ ಮಜ್ದೂರು ಸಂಘದ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಕೆ. ಸುರೇಂದ್ರನ್, ಎಬಿವಿಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕೆ.ಎನ್. ರಘುನಂದನ್ ಹಾಗೂ ಲಕ್ಷ್ಮಣ ತಂಡದಲ್ಲಿದ್ದರು.

ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾಕ್, ಸಂಸ್ಥೆಯ ಸಂಚಾಲಕ ಸಂಜೀತ್ ನಾಕ್, ಪ್ರಮುಖರಾದ ಅಂಜು ಆಳ್ವ, ಕೇಂದ್ರ ಸೆನ್ಸರ್ ಬೋರ್ಡ್‌ನ ಸದಸ್ಯೆ ಹರಿಣಿ ರಾಯಸಂ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ, ವಕೀಲರಾದ ರವಿಚಂದ್ರ ಪಿ.ಎಂ, ವಿಶ್ವನಾಥ, ವಿನಯಾ, ಬಾಲಕೃಷ್ಣ, ರಾಮು, ಶಕ್ತಿ ಎಜುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News