×
Ad

ಎ.ಕೆ ರಾಮೇಶ್ವರ, ಮೂರ್ತಿದೇರಾಜೆ, ಸಾನಿಧ್ಯ ಸಂಸ್ಥೆ, ಸದ್ಗುಣ್ ಐತಾಳರಿಗೆ ಪ್ರಶಸ್ತಿ

Update: 2018-11-10 20:03 IST
ರಾಮೇಶ್ವರ, ಮೂರ್ತಿದೇರಾಜೆ, ಸದ್ಗುಣ್ ಐತಾಳ್

ಮೂಡುಬಿದಿರೆ, ನ. 10: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ಆಳ್ವಾಸ್ ವಿದ್ಯಾರ್ಥಿಸಿರಿ 2018ರ ಸಾಲಿನ ಆಳ್ವಾಸ್ ವಿದ್ಯಾರ್ಥಿ ಸಿರಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಹಿರಿಯ ಮಕ್ಕಳ ಸಾಹಿತಿ ಕಲಬುರ್ಗಿಯ ಎ.ಕೆ. ರಾಮೇಶ್ವರ ಅವರಿಗೆ `ಆಳ್ವಾಸ್ ವಿದ್ಯಾರ್ಥಿಸಿರಿ ಗೌರವ ಪ್ರಶಸ್ತಿ' ನೀಡಲಾಗುವುದು. ಮಕ್ಕಳ ರಂಗಭೂಮಿಗೆ ಸೇವೆ ಸಲ್ಲಿಸಿದ ವಿಟ್ಲದ ಸಮಸಾಂಪ್ರತಿ ತಂಡದ ನಿರ್ದೆಶಕ, ಮಕ್ಕಳ ರಂಗವಿನ್ಯಾಸಕಾರ ಮೂರ್ತಿದೇರಾಜೆ, ಮಕ್ಕಳ ವ್ಯಕ್ತಿತ್ವ ಸಂವರ್ಧನೆಗೆ ದುಡಿಯುತ್ತಿರುವ ಮಂಗಳೂರಿನ ಶಕ್ತಿನಗರದ ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಬಾಲಪ್ರತಿಭೆ ಮಂಗಳೂರು ಶಾರದಾ ವಿದ್ಯಾಲಯದ ವಿದ್ಯಾರ್ಥಿ ಸದ್ಗುಣ ಐತಾಳ್ ಅವರನ್ನು ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News