ಯುವತಿಗೆ ಕಿರುಕುಳ: ಆರೋಪಿ ಸೆರೆ
Update: 2018-11-10 20:26 IST
ಬಂಟ್ವಾಳ, ನ. 10: ಯುವತಿಯೋರ್ವಳನ್ನು ಚುಡಾಯಿಸಿದ ಆರೋಪದ ಮೇರೆಗೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಮಣಿಹಳ್ಳದಲ್ಲಿ ಎಂಬಲ್ಲಿ ನಡೆದಿದೆ.
ಕಾರ್ಕಳ ಪೆತಂಜೆಕಟ್ಟೆ ನಿವಾಸಿ ಫಿರೋಝ್ ಅಹ್ಮದ್ (38) ಪೊಲೀಸರು ವಶಕ್ಕೆಪಡೆದುಕೊಂಡಿರುವ ವ್ಯಕ್ತಿ. ನಿನ್ನೆ ರಾತ್ರಿ ತನ್ನ ಸ್ನೇಹಿತೆ ಜಯಾಲಕ್ಷ್ಮಿ ಅವರೊಂದಿಗೆ ಕೆಲಸ ಮುಗಿಸಿಕೊಂಡು ಮಣಿಹಳ್ಳದ ಮನೆ ಕಡೆಗೆ ಹೋಗುತ್ತಿರುವಾಗ ವ್ಯಕ್ತಿಯೊಬ್ಬರು ತನ್ನ ಕೈಹಿಡಿದು ಚುಡಾಯಿಸಿದ್ದು, ಸಹಾಯಕ್ಕಾಗಿ ಸ್ನೇಹಿತೆ ಕಿರುಚಿದಾಗ ತನ್ನನ್ನು ದೂಡಿ, ಪರಾರಿಯಾಗಿದ್ದಾನೆ ಎಂದು ಬಂಟ್ವಾಳ ಕಸ್ಬಾ ಗ್ರಾಮದ ತಾರಿಪಡ್ಪು ನಿವಾಸಿ ಜಯಶ್ರೀ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.