ಬೆಳ್ಮ ಕಾನೆಕೆರೆ ಸಮಸ್ಯೆ: ಎಸ್‌ಡಿಪಿಐ ನಿಯೋಗದಿಂದ ಡಿಸಿ ಭೇಟಿ
ಮಂಗಳೂರು, ನ.10: ತಾಲೂಕಿನ ಬೆಳ್ಮ ಗ್ರಾಮದ ದೇರಳಕಟ್ಟೆ-ಕಾನೆಕೆರೆ ಪ್ರದೇಶದ ಗಂಭೀರ ಸಮಸ್ಯೆಗಳಾದ ಬಹುಮಹಡಿ ವಸತಿ, ವಾಣಿಜ್ಯ ಸಂಕೀರ್ಣ ಗಳಿಂದ ಅವೈಜ್ಞಾನಿಕ ಡ್ರೈನೇಜ್ ಸಮಸ್ಯೆಗಳನ್ನು ಪರಿಹರಿಸಲು ಬೆಳ್ಮ ಕಾನೆಕೆರೆ ನಿವಾಸಿಗಳೊಂದಿಗೆ ಎಸ್‌ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ನಿಯೋಗ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಭೇಟಿ ಮಾಡಿ ಆಗ್ರಹಿಸಿತು.
ಡ್ರೈನೇಜ್ ಸಮಸ್ಯೆಗಳಿಂದ ಹೊರಡುವ ಮಲಿನ ನೀರು, ದುರ್ನಾತಯುತ ತ್ಯಾಜ್ಯ, ತೆರೆದ ಕೆರೆ ಮತ್ತು ಬಾವಿಯಲ್ಲಿ ಶೇಖರಿಸುತ್ತಿರುವ ದುರವಸ್ಥೆ, ಸ್ಥಳೀಯ ಕೆಲವು ನಿವಾಸಿಗಳ ಬಾವಿಯಲ್ಲಿ ಉರಿಸಾಧ್ಯವಾದ ತೈಲ ಅಂಶ ಪತ್ತೆ, ಕೆಲವು ನಿರ್ದಿಷ್ಟ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಮನವಿಯಲ್ಲಿ ದೂರಿದರು.
ನಿರ್ಮಾಣ ಪೂರ್ವ ನೀತಿ ನಿಯಮಗಳನ್ನು ಪಾಲಿಸದೆ ಕಟ್ಟಡ ನಿರ್ಮಾಣಗಳ ಅವ್ಯವಸ್ಥೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಹಲವು ವರ್ಷ ಗಳಿಂದ ಒತ್ತಾಯಿಸುತ್ತಿದ್ದರೂ ಇಲ್ಲಯವರೆಗೆ ಯಾವುದೇ ಸಮಸ್ಯೆ ದೂರವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸುವ ಭರವಸೆ ನೀಡಿದರು.
ನ್ಯಾಯದ ಬೇಡಿಕೆ ಇಟ್ಟುಕೊಂಡು ಮುಂದಿನ ಹೋರಾಟದ ಬಗ್ಗೆ ನಿಯೋಗವು ಚರ್ಚಿಸಿತು. ಭೇಟಿ ನೀಡಿದ ನಿಯೋಗದಲ್ಲಿ ಸ್ಥಳೀಯ ನಿವಾಸಿಗಳಾದ ಮುಹಮ್ಮದ್ ಫಾರೂಕ್ ಕಾನೆಕೆರೆ, ಸುಬ್ರಮಣ್ಯ ಭಟ್ ಕಾನೆಕೆರೆ, ಜಿಲ್ಲಾ ಉಪಾಧ್ಯಕ್ಷ ಆ್ಯಂಟನಿ ಪಿ.ಡಿ., ಸ್ಥಳೀಯರಾದ ರಾಮಚಂದ್ರ ಭಟ್ ಗುಣಾಜೆ, ನವಾಝ್ ಕಾನೆಕೆರೆ, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಜಿಲ್ಲಾ ಸಮಿತಿ ಸದಸ್ಯ ಝಾಹೀದ್ ಮಲಾರ್, ಎಸ್‌ಡಿಪಿಐ ಮಂಗಳೂರು ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯ, ಬೆಳ್ಮ ಸಮಿತಿ ಅಧ್ಯಕ್ಷ ಇರ್ಫಾನ್ ಬರುವ, ಉಸ್ಮಾನ್ ಕಾನೆಕೆರೆ, ಇರ್ಷಾದ್ ಇಸ್ಮಾಯೀಲ್, ಹಸನ್ ರಾಯಲ್ ದೇರಳಕಟ್ಟೆ, ಸಲಾಂ ಕಾನೆಕೆರೆ ಮತ್ತಿತರರು ಉಪಸ್ಥಿತರಿದ್ದರು.