×
Ad

ಕಳವು ಪ್ರಕರಣ: ಬಾಲಕ ಸೆರೆ

Update: 2018-11-10 21:06 IST

ಮಂಗಳೂರು, ನ.10: ನಗರದ ಕಸಬಾ ಬೆಂಗ್ರೆಯ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ಬಾಲಕನೊಬ್ಬನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಬಾಲಕನಿಂದ 3 ಗ್ರಾಂ ತೂಕವಿರುವ ಮಗುವಿನ ಚಿನ್ನದ ಬ್ರಾಸ್‌ಲೈಟ್ 1, ಕಿವಿಯ ಟಿಕ್ಕಿ 1, ಕರಿಮಣಿ ಸರದ 11 ಗುಂಡುಗಳು, ಚಿನ್ನದ ಹುಕ್ 1, ಕರಿ ಮಣಿ ಗುಂಡು 14 ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ವಿವರ: 2018ರ ಅ.11ರಂದು ಕಸಬಾ ಬೆಂಗ್ರೆಯಲ್ಲಿನ ಶೈನಾಝ್ ಎಂಬವರ ಮನೆಯಲ್ಲಿ ರಾತ್ರಿ ಕಳ್ಳತನ ನಡೆದಿತ್ತು. ಈ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರು ಆರೋಪಿಯ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಶನಿವಾರ ಮಧ್ಯಾಹ್ನ ಪಣಂಬೂರು- ಕುದುರೆಮುಖ ಜಂಕ್ಷನ್ ಬಳಿ ಬಾಲಕ ನನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್ ಮಾರ್ಗದರ್ಶನದಂತೆ ಮಂಗಳೂರು ಉತ್ತರ ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಪಿಎಸ್ಸೈ ಉಮೇಶ್ ಕುಮಾರ್ ಹಾಗೂ ಪಣಂಬೂರು ರೌಡಿ ನಿಗ್ರಹದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News