ಸಾಹಿತ್ಯದಿಂದ ಸಾಮರಸ್ಯ ಸಾಧ್ಯ: ಫಾ.ಪಾವ್ಲ್ ರೇಗೋ

Update: 2018-11-10 15:42 GMT

ಶಿರ್ವ, ನ.10: ಸಾಹಿತ್ಯಕ್ಕೆ ಜಾತಿಮತದ ಲೇಪನವಿಲ್ಲ. ಜೀವನಾನುಭವದ ವೌಲ್ಯಗಳ ಸಂಗ್ರಹವೇ ಸಾಹಿತ್ಯ. ಅದು ಭವಿಷ್ಯದ ಪೀಳಿಗೆಗೆ ದಾರಿದೀಪ ಹಾಗೂ ಆದರ್ಶವನ್ನು ನೀಡುತ್ತದೆ. ಸಾಹಿತ್ಯದಿಂದ ಸಾಮರಸ್ಯ ಸಾಧ್ಯ ಎಂದು ಪಾಂಬೂರು ಹೋಲಿಕ್ರಾಸ್ ಚರ್ಚ್‌ನ ಧರ್ಮಗುರು ರೆ.ಫಾ.ಪಾವ್ಲ್ ರೇಗೊ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿಯಿಂದ ‘ಸಂಪದ-2018’ ವೈವಿದ್ಯಮಯ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಬಂಟಕಲ್ಲು ಬಿ.ಪುಂಡಲೀಕ ಮರಾಠೆಯವರ ನಿವಾಸದಲ್ಲಿ ಜರಗಿದ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಉ್ಘಾಟಿಸಿ ಅವರು ಮಾತ ನಾಡುತಿದ್ದರು.

ಶಿರ್ವ ಜಾಮಿಯಾ ಮಸೀದಿಯ ಧರ್ಮಗುರು ಜನಾಬ್ ಸಿರಾಜುದ್ದೀನ್ ಝೈನಿ ಮಾತನಾಡಿ, ಪ್ರತಿಯೊಬ್ಬರೂ ಮೊದಲು ತನ್ನ ಸ್ವಂತ ನಾಡನ್ನು, ದೇಶ ವನ್ನು ಪ್ರೀತಿಸುವುದು ಕರ್ತವ್ಯವಾಗಿದೆ. ಎಲ್ಲರಲ್ಲೂ ಸೈನಿಕರ ತ್ಯಾಗ, ದೇಶ ಪ್ರೇಮ, ಭಾಷಾ ಪ್ರೇಮವನ್ನು ಬೆಳೆಯಬೇಕು ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ 90ರ ಹರೆಯದ ಹಿರಿಯ ಸಾಧಕರುಗಳಾದ ಶ್ರೀಕ್ಷೇತ್ರ ಬಂಟಕಲ್ಲಿನ ಅರ್ಚಕ ವೇದಮೂರ್ತಿ ಕೆ.ವೇದವ್ಯಾಸರಾಯ ಭಟ್, ನಿವೃತ್ತ ಶಿಕ್ಷಕ ವೌರಿಸ್ ನೊರೋನ್ನ ಪಾಂಬೂರು, ಸಮಾಜಸೇವಕ ಸಿರಿಲ್ ಕ್ವಾಡ್ರಸ್ ಬಂಟಕಲ್ಲು ಅವರಿಗೆ ಕನ್ನಡ ರಾಜ್ಯೋತ್ಸವ ಗೌರವ ನೀಡಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಜಿಲ್ಲಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಶಿರ್ವ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಬಾಕರ ಶೆಟ್ಟಿ ಕೊಂಡಳ್ಳಿ, ಬ್ರಹಾವರ ತಾಲೂಕು ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಹಿರಿಯ ಕಲಾವಿದ ಚಂದ್ರಶೇಖರ ಕೆದಿಲಾಯ, ಪತ್ರಕರ್ತ ಶೇಖರ ಅಜೆಕಾರು, ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ಪ್ರೊ.ತಿರುಮಲೇಶ್ವರ ಭಟ್, ಕುತ್ಯಾರು ಪರಶುರಾಮೇಶ್ವರ ಕ್ಷೇತ್ರದ ಧರ್ಮದರ್ಶಿ ಶಂಭುದಾಸ್ ಗುರೂಜಿ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಬಂಟಕಲ್ಲು ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ಅರಣ್ಯ ಇಲಾಖೆಯ ನಾಗೇಶ ಬಿಲ್ಲವ, ತಾಪಂ ಸದಸ್ಯೆ ಗೀತಾ ವಾಗ್ಲೆ ಮೊದಲಾದವರು ಉಪಸ್ಥಿತರಿದ್ದರು.

ಕಲಾವಿದ ಗಣೇಶ್ ಗಂಗೊಳ್ಳಿ ಕನ್ನಡ ಗೀತೆಗಳನ್ನು ಹಾಡಿದರು. ಕವಿಗಳಾದ ವಿಠಲ ನಾರಾಯಣ ಪುರಾಣಿಕ, ಫಿಲಿಪ್ ರಾಜ್, ಪ್ರೊ.ವಿಠಲ್ ನಾಯಕ್, ಕರ್ವಾಳ್ ಕುಸುಮಾ ಕಾಮತ್, ಕೃಷಾ ಬಾಗಲಕೋಟ, ಶಿವಾನಂದ ಕಾಮತ್ ಶಿರ್ವ, ರೈಸನ್, ಪ್ರತೀಕ್, ನಿಶಿತಾ ಕವನ ವಾಚನ ಮಾಡಿದರು. ಸತ್ಯಸಾಯಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News