ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಖಂಡನೆ
ಉಡುಪಿ, ನ.10: ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕಿಣಿ ಹಾಗೂ ಜೆಡಿಎಸ್‌ನ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಇದು ಅವರ ನಾಲಗೆ ಹಾಗೂ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.
ಟಿಪ್ಪು ಜಯಂತಿಯ ವಿರುದ್ಧ ಪ್ರತಿಭಟನೆಯ ವೇಳೆ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಟಿಪ್ಪು ಜಯಂತಿ ಮಾಡೋ ಬದಲು ಸಿದ್ದರಾಮಯ್ಯನ ಜಯಂತಿ ಮಾಡಬಹುದಿತ್ತು ಎಂದು ನೀಡಿದ ಹೇಳಿಕೆ, ಟಿಪ್ಪು ಜಯಂತಿ ಬಗ್ಗೆ ಆಕ್ಷೇಪ ಇರೋದು ಬಹುಸಂಖ್ಯಾತರಿಗೆ ಅಲ್ಲ ಕೇವಲ ಬಿಜೆಪಿಯವರಿಗೆ ಮಾತ್ರ ಎಂಬು ದನ್ನು ತೋರಿಸುತ್ತದೆ ಎಂದು ಕಿಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್. ಅಶೋಕ್ ಈ ಹಿಂದೆ ಟಿಪ್ಪು ವೇಷ ತೊಟ್ಟು, ಟಿಪ್ಪುವನ್ನು ಇನ್ನಿಲ್ಲದ ಪದಗಳಲ್ಲಿ ಹೊಗಳಿ ಈಗ ಏಕಾಏಕಿ ಉಲ್ಟಾ ಹೊಡೆಯುತ್ತಿರುವುದರ ಹಿಂದಿನ ಕಾರಣವನ್ನು ಸ್ಪಷ್ಟಪಡಿಸಲಿ ಎಂದವರು ಹೇಳಿದ್ದಾರೆ.
ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್. ಅಶೋಕ್ ಈ ಹಿಂದೆ ಟಿಪ್ಪು ವೇಷ ತೊಟ್ಟು, ಟಿಪ್ಪುವನ್ನು ಇನ್ನಿಲ್ಲದ ಪದಗಳಲ್ಲಿ ಹೊಗಳಿ ಈಗ ಏಕಾಏಕಿ ಉಲ್ಟಾ ಹೊಡೆಯುತ್ತಿರುವುದರ ಹಿಂದಿನ ಕಾರಣವನ್ನು ಸ್ಪಷ್ಟಪಡಿಸಲಿ ಎಂದವರು ಹೇಳಿದ್ದಾರೆ.
ಯೋಗೀಶ್ ಶೆಟ್ಟಿ: ಮಂಗಳೂರು ಸಂಸದ ನಳಿನ್ ಕುಮಾರ್ ಆಡಿದ ಮಾತು ಗಳು ನಿಜಕ್ಕೂ ನಾಚಿಕೆ ಗೇಡಿನದು. ಅವರ ಮಾತುಗಳು ಅವರ ಸಂಸ್ಕೃತಿ ಯನ್ನು ತೋರಿಸುತ್ತದೆ. ರಾಜ್ಯದ ಮುಖ್ಯಮಂತ್ರಿ ಬಗ್ಗೆ ಯಾವ ರೀತಿ ಮಾತಾಡಬೇಕು ಅನ್ನೋ ಜ್ಞಾನ ಕೂಡ ಅವರಿಗೆ ಇಲ್ಲ. ಧರ್ಮದ ಹೆಸರಿನಲ್ಲಿ ಕೆಟ್ಟ ರಾಜಕೀಯ ಮಾಡಿ ಸಂಸದರಾದವರ ನಾಲಿಗೆಯಿಂದ ಇದನ್ನೇ ನಿರೀಕ್ಷೆ ಮಾಡಬೇಕು ಎಂದು ಯೋಗೀಶ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.