ಕಾಣಿಯೂರು ಮಠದಿಂದ ಪ್ರತಿಭಾ ಪುರಸ್ಕಾರ
Update: 2018-11-10 22:09 IST
ಉಡುಪಿ, ನ.10: ಕಾಣಿಯೂರು ಮಠದ ವಿದ್ಯಾಸಮುದ್ರ ತೀರ್ಥ ಟ್ರಸ್ಟ್‌ನಿಂದ ಎಸೆಸೆಲ್ಸಿ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಇಪ್ಪತ್ತು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.
ಕಾಣಿಯೂರು ಮಠದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲತೀರ್ಥ ಶ್ರೀಪಾದರು ನಗದು ಬಹುಮಾನ ಹಾಗೂ ಪುರಸ್ಕಾರ ನೀಡಿ ಹರಸಿದರು.
ಟ್ರಸ್ಟ್‌ನ ವ್ಯವಸ್ಥಾಪಕ ಹರೀಶ್ ಹಾಗೂ ಪ್ರಾಧ್ಯಾಪಕ ಎಚ್.ಎನ್. ಶೃಂಗೇಶ್ವರ ಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು