ಮಣಿಪಾಲದ ಟ್ಯಾಪ್ಮಿಗೆ ‘ಆಟಂ’ ಅಗ್ರ ಪ್ರಶಸ್ತಿ

Update: 2018-11-10 16:41 GMT

ಮಣಿಪಾಲ, ನ.10: ಬಜಾಜ್ ಫಿನ್‌ಸರ್ವ್ ದೇಶದ ಅಗ್ರಮಾನ್ಯ ಬಿ-ಸ್ಕೂಲ್‌ಗಳಿಗಾಗಿ ಪುಣೆಯಲ್ಲಿ ಈಚೆಗೆ ನಡೆಸಿದ ಕ್ಯಾಂಪಸ್ ಸ್ಪರ್ಧೆ ‘ಆಟಂ’ನಲ್ಲಿ ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ‘ಟೀಮ್ ಅರ್ಬಿಟ್ರೇಜರ್’ ತಂಡ ಅಗ್ರಸ್ಥಾನದೊಂದಿಗೆ ಐದು ಲಕ್ಷ ರೂ.ಗಳ ಪ್ರಥಮ ನಗದು ಬಹುಮಾನವನ್ನು ಗೆದ್ದುಕೊಂಡಿತು.

ಮೊದಲ ಬಾರಿಗೆ ನಡೆದ ಈ ಸ್ಪರ್ಧೆಯಲ್ಲಿ ದೇಶದ 16 ಅಗ್ರಗಣ್ಯ ಬಿ-ಸ್ಕೂಲ್ ತಂಡಗಳು ಪಾಲ್ಗೊಂಡಿದ್ದವು. ಇವುಗಳಲ್ಲಿ ಐದು ತಂಡಗಳು ಮೆಗಾ ಫೈನಲ್‌ನಲ್ಲಿ ಸೆಣಸಿದ್ದು, ಅಂತಿಮವಾಗಿ ಟ್ಯಾಪ್ಮಿ ತಂಡ ಅಗ್ರಸ್ಥಾನದೊಂದಿಗೆ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿತು.

ಅಹಮ್ಮದಾಬಾದ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂ) ‘ರಾಕೆಟ್’ ತಂಡ ರನ್ನರ್ ಅಫ್ ಸ್ಥಾನದೊಂದಿಗೆ ಮೂರು ಲಕ್ಷ ರೂ.ನಗದು ಬಹುಮಾನವನ್ನು ಜಯಿಸಿತು. ಸ್ಪರ್ಧೆಗಳು ಅತ್ಯಂತ ಪೈಪೋಟಿಯಿಂದ ಕೂಡಿತ್ತು. ಭವಿಷ್ಯದ ಆರ್ಥಿಕ ಕ್ಷೇತ್ರ ಗಳಿಗೆ ನೂತನ ಪೀಳಿಗೆಯ ಪರಿಹಾರವನ್ನು ಕಂಡುಕೊಳ್ಳುವ ಸ್ಪರ್ಧೆಯಲ್ಲಿ ಯುವ ಮನಸ್ಸುಗಳನ್ನು ಅತ್ಯಂತ ಉತ್ಸಾಹದಿಂದಲೇ ಭಾಗವಹಿಸಿದ್ದವು.

ಸ್ಪರ್ಧೆಯಲ್ಲಿ ಅಹ್ಮದಾಬಾದ್, ಬೆಂಗಳೂರು, ಕೋಲ್ಕತ್ತಾ, ಇಂದೋರ್, ಕಲ್ಲಿಕೋಟೆ ಹಾಗೂ ಲಕ್ನೋಗಳ ಐಐಎಂಗಳೊಂದಿಗೆ ಎಂಎಂಎಸ್, ಐಎಸ್‌ಬಿ, ಐಎಂಟಿ, ಎಂಡಿಐಐ, ಎಸ್‌ಪಿ ಜೈನ್, ಎಸ್‌ಐಬಿಎಂ ಮುಂತಾದ ದೇಶದ ಅಗ್ರಗಣ್ಯ ಬಿ-ಸ್ಕೂಲ್‌ಗಳು ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News