ನ.14: ಎಸ್‌ಡಿಎಂನಲ್ಲಿ ವಿಶೇಷ ಉಪನ್ಯಾಸ
ಉಡುಪಿ, ನ.10: ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಬಾಲರೋಗ ವಿಭಾಗ ಮತ್ತು ತಂಜಾವೂರಿನ ಫಾರ್ಮಾ ಪ್ರೊಡಕ್ಟ್ಸ್‌ನ ಸಂಯುಕ್ತ ಆಶ್ರಯದಲ್ಲಿ ‘ಮಕ್ಕಳ ದಿನಾಚರಣೆ’ಯ ಪ್ರಯುಕ್ತ ನ.14ರ ಬುಧವಾರ ಅಪರಾಹ್ನ 2:30ಕ್ಕೆ ‘ಮಕ್ಕಳಲ್ಲಿ ಕಂಡುಬರುವ ನಡವಳಿಕೆಯ ತೊಂದರೆಗಳು ಮತ್ತು ಪರಿಹಾರ’ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಎಸ್‌ಡಿಎಂ ಕಾಲೇಜಿನ ಕಾಯಚಿಕಿತ್ಸಾ ವಿಭಾಗದ ಸಹಪ್ರಾಧ್ಯಾಪಕ ಡಾ. ವಿಜಯೇಂದ್ರ ಭಟ್ ಸಾರ್ವಜನಿಕರಿಗಾಗಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ‘ಆರೋಗ್ಯವಂತ ಶಿಶು ಮತ್ತು ಛದ್ಮವೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವ ವಂತೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೂ ಆಟಿಕೆಗಳನ್ನು ನೀಡಲಾ ಗುವುದು. ಶಿಶು ಸ್ಪರ್ಧೆಯಲ್ಲಿ ಭಾಗವಹಿಸುವವರು ಚುಚ್ಚುಮದ್ದಿನ ಹಾಗೂ ಎಸ್‌ಡಿಎಂ ಸ್ವರ್ಣಪ್ರಾಶನ ಕಾರ್ಡನ್ನು ತರಬೇಕು. ಹೆಸರು ನೊಂದಾಯಿಸಿ ಕೊಳ್ಳಲು ದೂರವಾಣಿ ಸಂಖ್ಯೆ:9483983839, 9448745477 ಕರೆ ಮಾಡು ವಂತೆ ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.