ಕುಲಶೇಖರದ ಯುವಕ ನಾಪತ್ತೆ
Update: 2018-11-10 22:41 IST
ಮಂಗಳೂರು, ನ.10: ಕುಲಶೇಖರ ನಿವಾಸಿ, ಬೋಳಾರ್‌ನ ಬ್ಯಾಂಕ್‌ವೊಂದರ ಅಟೆಂಡರ್‌ಆಗಿದ್ದ ಮಧುಸೂದನ್ ಹೆಬ್ಬಾರ್ (35) ಶುಕ್ರವಾರ ಸಂಜೆ ಕೆಲಸ ಮುಗಿಸಿಕೊಂಡು ಹೋದವರು ವಾಪಸಾಗದೆ ನಾಪತ್ತೆಯಾಗಿದ್ದಾರೆ.
ಮಧುಸೂದನ್ ಅವರ ಮೊಬೈಲ್‌ಗೆ ಸಂಪರ್ಕಿಸಿದರೂ ಸ್ವೀಕರಿಸಿಲ್ಲ. ಅವರ ಮೊಬೈಲ್ ಸಂಜೆ 7 ಗಂಟೆವರೆಗೆ ಚಾಲನೆಯಲ್ಲಿದ್ದು, ಬಳಿಕ ಸ್ವೀಚ್‌ಆಫ್ ಆಗಿದೆ. ಕಾಣೆಯಾದ ಯುವಕನ ಬಗ್ಗೆ ನೆರೆಹೊರೆ, ಸಂಬಂಧಿಕರಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ದೊರೆತಿಲ್ಲ ಎಂದು ತಿಳಿದುಬಂದಿದೆ.
ಚಹರೆ: 5.6 ಅಡಿ ಎತ್ತರ, ಬಳಿ ಬಣ್ಣ, ಸಪೂರ ಶರೀರ, ಬಿಳಿ ಗೆರೆಯಿರುವ ಅರ್ಧತೋಳಿನ ಶರ್ಟ್ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಭಾಷೆ ಮಾತನಾಡುತ್ತಾರೆ.
ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆ (0824- 2220518/ 9480805346) ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.