ಉನ್ನತ್ ಭಾರತ್ ಅಭಿಯಾನಕ್ಕೆ ಬಂಟಕಲ್ ಇಂಜಿನಿಯರಿಂಗ್ ಕಾಲೇಜು ಆಯ್ಕೆ

Update: 2018-11-12 13:53 GMT

ಶಿರ್ವ, ನ.12: ಬಂಟಕಲ್ಲಿನ ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯವು ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಉನ್ನತ್ ಭಾರತ್ ಅಭಿಯಾನದ ಸಹಭಾಗಿ ಸಂಸ್ಥೆಯಾಗಿ ಆಯ್ಕೆಯಾಗಿದೆ.

ಈ ಕಾರ್ಯಕ್ರಮದ ಭಾಗವಾಗಿ ಸಂಸ್ಥೆಯು ಶಿರ್ವ, ಇನ್ನಂಜೆ, ಕುರ್ಕಾಲ್, ಕಟಪಾಡಿ ಮತ್ತು ಕೋಟೆ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದು, ಈ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗೆ ತನ್ನ ಕೊಡುಗೆಯನ್ನು ಸಲ್ಲಿಸಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಂಸ್ಥೆಯು ಈ ಐದು ಗ್ರಾಮಗಳಲ್ಲಿ ಪ್ರಾಥಮಿಕ ಹಂತದ ಸರ್ವೇ ಕ್ಷಣೆಯನ್ನು ನಡೆಸಿದ್ದು ಅವುಗಳ ಆಧಾರದಲ್ಲಿ ಗ್ರಾಮಗಳ ಕೊರತೆ ಮತ್ತು ಅವುಗಳನ್ನು ನೀಗಿಸುವ ತಾಂತ್ರಿಕ ಪರಿಹಾರಗಳ ಬಗ್ಗೆ ಯೋಜನಾ ವರದಿ ತಯಾರಿಸಲಿದೆ.

ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಜನರ ಜತೆ ಬೆರೆತು ಕಾರ್ಯ ನಿರ್ವಹಿಸುವ, ಅಭಿವೃದ್ದಿಗೆ ಇರುವ ಸವಾಲುಗಳನ್ನು ಮತ್ತು ನಿಜವಾಗಿಯೂ ಅಭಿವೃದ್ದಿ ಆಗಲೇಬೇಕಾದ ಕ್ಷೇತ್ರಗಳನ್ನು ಗುರುತಿಸುವ ಹಾಗೂ ಗ್ರಾಮದ ಸಹನೀಯ ಅಭಿವೃದ್ದಿಗೆ ಬೇಕಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News