×
Ad

ಡಿ.18: ಮಿಸಸ್ ಇಂಡಿಯಾ ಸ್ಪರ್ಧೆಗೆ ಆಡಿಶನ್

Update: 2018-11-12 19:26 IST

ಮಂಗಳೂರು, ನ.12: ಪಾತ್ ವೇ ಎಂಟರ್‌ಪ್ರೈಸಸ್ ಆ್ಯಂಡ್ ಮರ್ಸಿ ಲೇಡಿಸ್ ಸಲೂನ್ ವತಿಯಿಂದ ಮಿಸಸ್ ಇಂಡಿಯಾ-2019 ಸ್ಪರ್ಧೆಗೆ ಡಿ.18ಕ್ಕೆ ಮಂಗಳೂರಿನಲ್ಲಿ ಆಡಿಶನ್ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕ ದೀಪಕ್ ಗಂಗೂಲಿ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿವಾಹಿತ ಮಹಿಳೆಯರಿಗಾಗಿರುವ ಈ ಸ್ಪರ್ಧೆಯ ಆಡಿಶನ್ ಭಟ್ಕಳದಿಂದ ಮಡಿಕೇರಿವರೆಗೆ ನಡೆಯಲಿದೆ. ಮೊದಲ ಆಡಿಶನ್ ಕುಂದಾಪುರದಲ್ಲಿ ನಡೆಯಲಿದ್ದು ಬಳಿಕ ಉಡುಪಿ, ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಾಸರಗೋಡು, ಮಡಿಕೇರಿ ಮುಂತಾದೆಡೆ ನಡೆಯಲಿದೆ. ಆಯ್ಕೆಯಾಗುವ ಮಂದಿ ರಾಜ್ಯಮಟ್ಟದಲ್ಲಿ ಆಡಿಶನ್ ನಡೆದು ಬಳಿಕ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಳ್ಳುವರು. ಜನವರಿಯಲ್ಲಿ ಫಿನಾಲೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮರ್ಸಿ ವೀನ್, ವಿಲ್ಸನ್, ಪ್ರಜ್ಞಾ, ಬಶೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News