ನ.16ರಂದು ಪಿಎಫ್ಐ ವತಿಯಿಂದ ಸಮುದಾಯ ಸಮ್ಮಿಲನ
Update: 2018-11-12 20:31 IST
ಕಾಪು, ನ.12: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಚ್ಚಿಲ ಏರಿಯಾ ವತಿಯಿಂದ ಸಮುದಾಯ ಸಮ್ಮಿಲನ ಕಾರ್ಯಕ್ರಮವು ನ.16ರಂದು ಸಂಜೆ 7:30ಕ್ಕೆ ಉಚ್ಚಿಲ ಭಾಸ್ಕರ ನಗರದ ಬೆಳಪು ಸೊಸೈಟಿ ಮೈದಾನದಲ್ಲಿ ಜರಗಲಿದೆ.
ಮುಖ್ಯ ಭಾಷಣಕಾರರಾಗಿ ಮಂಗಳೂರು ಕ್ರಿಯೇಟಿವ್ ಫೌಂಡೇಶನ್‌ನ ಸದಸ್ಯ ಅನ್ವರ್ ಸಾದತ್ ಗೂಡಿನಬಳಿ ‘ಸಹೋದರತೆ’ ಕುರಿತು ಹಾಗೂ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ‘ಪ್ರಸ್ತುತ ಪರಿಸ್ಥಿತಿ’ ಕುರಿತು ಮಾತನಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.