×
Ad

ಸುಪ್ತ ಪ್ರತಿಭೆಗಳ ಅನಾವರಣಕ್ಕೆ ರಂಗ ತರಬೇತಿ ಸೂಕ್ತ: ಪ್ರಕಾಶ್

Update: 2018-11-12 20:36 IST

ಉಡುಪಿ, ನ.12: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ರಂಗ ತರಬೇತಿ ಬಹಳಷ್ಟು ಸಹಕಾರಿಯಾಗುತ್ತದೆ. ಇದು ಆತ್ಮವಿಶ್ವಾಸ ಹೆಚ್ಚಿಸುವುದ ರೊಂದಿಗೆ ಮಾನಸಿಕ ವಿಕಸನಕ್ಕೆ ಪೂರಕವಾಗುತ್ತದೆ ಎಂದು ಕೊಡವೂರು ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಹೇಳಿದ್ದಾರೆ.

ಸಂತೆಕಟ್ಟೆಯ ಹೆಣ್ಣು ಮಕ್ಕಳ ಪಾಲನೆ ಮತ್ತು ಪೋಷಣಾ ಸಂಸ್ಥೆ ಪ್ಲಾನೆಟ್ ಮಾರ್ಸ್‌ ಫೌಂಡೇಶನ್‌ನ ವಿದ್ಯಾರ್ಥಿಗಳಿಗೆ ಸುಮನಸಾದ ವತಿಯಿಂದ ಇತ್ತೀಚೆಗೆ ನಡೆದ ಕಿಶೋರಿ ರಂಗ ಅಭಿನಯ ತರಬೇತಿ ಶಿಬಿರ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡುತ್ತಿದ್ದರು.

ರಂಗ ಶಿಬಿರದ ತರಬೇತುದಾರ ರಂಗ ನಿರ್ದೇಶಕ ಯೋಗೀಶ್ ಕೊಳಲಗಿರಿ ಉಪಸ್ಥಿತರಿದ್ದರು. ಅವರು ವಿದ್ಯಾರ್ಥಿನಿಯರಿಗೆ ನಿರ್ದೇಶಿಸಿದ ‘ದೇವರಿದ್ದಾನೆ’ ಕಿರು ನಾಟಕ ಹಾಗೂ ಜನಜಾಗೃತಿ ಮೂಕಾಭಿನಯವನ್ನು ಪ್ರರ್ದಶಿಸಲಾಯಿತು. ಈ ಸಂಧರ್ಭದಲ್ಲಿ ಫೌಂಡೇಶನ್‌ನ ಉಪಾಧ್ಯಕ್ಷ ಹರೀಶ್ ಕೋಟ್ಯಾನ್, ಗೀತಾ, ಗಿಣೀತಾ, ನಮೃತಾ, ಕೃಸ್ಟಿಲ್, ಸುಮನಸಾ ಸಂಸ್ಥೆಯ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು. ಕಾವ್ಯ ಸ್ವಾಗತಿಸಿದರು. ನೇತ್ರ ಕಾರ್ಯಕ್ರಮ ನಿರೂಪಿಸಿದರು. ಸ್ಪೂರ್ತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News