ಬೆಳುವಾಯಿ ಸಿ.ಎ.ಬ್ಯಾಂಕಿನಲ್ಲಿ ಜಿಲ್ಲಾ ಸಹಕಾರಿ ಸಪ್ತಾಹ ದಿನಾಚರಣೆ

Update: 2018-11-12 16:16 GMT

ಮೂಡುಬಿದಿರೆ, ನ. 12: ದ.ಕ ಜಿಲ್ಲಾ ಮಟ್ಟದ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆಯಲ್ಲಿ 6ನೇ ದಿನದ ಸಹಕಾರ ಸಂಭ್ರಮ ಕಾರ್ಯಕ್ರಮ ನ19ರಂದು ಬೆಳಿಗ್ಗೆ 10.30ಕ್ಕೆ ಕೆಸರ್‍ಗದ್ದೆ ಸಹಕಾರಿ ವ್ಯವಸಾಯಿಕ ಬ್ಯಾಂಕ್‍ಶಾಖೆಯ ಸಭಾಭವನದಲ್ಲಿ  ನಡೆಯಲಿದೆ. ಇದೇ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರ ತುರ್ತು ಅಗತ್ಯಗಳಿಗೆ, ಸ್ವಚ್ಛತಾ ಕಾರ್ಯಗಳಿಗಾಗಿ ಮತ್ತು ರಸಗೊಬ್ಬರ ಸಾಗಾಟಕ್ಕೆ ನೂತನ 'ಸಹಕಾರಿ' ವಾಹನ ಸೌಲಭ್ಯ ಉದ್ಘಾಟನೆ, ಹಿರಿಯ ಸಹಕಾರಿಗಳಿಗೆ, ಸ್ವಸಹಾಯ ಗುಂಪು, ತಾಲೂಕು ಮಟ್ಟದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಹೇಳಿದ್ದಾರೆ. ಅವರು ಸೋಮವಾರ ಬ್ಯಾಂಕಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. 

ಯುವಜನ, ಮಹಿಳೆ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳು ಕುರಿತಂತೆ ಸಹಕಾರಿ ಸಪ್ತಾಹ ದಿನದ ಸಂಭ್ರಮವನ್ನು ಜಿಲ್ಲಾ ಎಸ್.ಸಿ.ಡಿ.ಸಿ.ಸಿ, ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಲ್ಲಿ ಬ್ಯಾಂಕಿನ ಗ್ರಾಹಕರ ತುರ್ತು ಅಗತ್ಯಗಳಿಗೆ, ಸ್ವಚ್ಛತಾ ಕಾರ್ಯಗಳಿಗಾಗಿ ಮತ್ತು ರಸಗೊಬ್ಬರ ಸಾಗಾಟಕ್ಕೆ ನೂತನ ಬ್ಯಾಂಕಿನ ವತಿಯಿಂದ ನೂತನ  'ಸಹಕಾರಿ' ವಾಹನ ಸೌಲಭ್ಯ ಉದ್ಘಾಟನೆಯನ್ನೂ ಅವರು ನೆರವೇರಿಸಲಿದ್ದಾರೆ. ಕಾರ್ಯಗಳಿಗಾಗಿ ಮತ್ತು ರಸಗೊಬ್ಬರ ಸಾಗಾಟಕ್ಕೆ ನೂತನ 'ಸಹಕಾರಿ' ವಾಹನ ಸೌಲಭ್ಯ ಉದ್ಘಾಟನೆ, ಹಿರಿಯ ಸಹಕಾರಿಗಳಿಗೆ, ಅತ್ಯುತ್ತಮ ನವೋದಯ ಸ್ವಸಹಾಯ ಗುಂಪು, ತಾಲೂಕು ಮಟ್ಟದಲ್ಲಿ ಸಾಧಕ ಹೈಸ್ಕೂಲು ವಿದ್ಯಾರ್ಥಿಗಳಿಗೆ ಶಾಸಕ ಉಮಾನಾಥ ಎ. ಕೋಟ್ಯಾನ್ ಸಮ್ಮಾನಿಸಲಿದ್ದಾರೆ.  

ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ ಸಹಕಾರಿ ಧ್ವಜಾರೋಹಣ ಮಾಡಲಿದ್ದಾರೆ. ಮೂಡುಬಿದಿರೆ ಸಹಕಾರಿ ತರಬೇತಿ ಕೇಂದ್ರದ ಉಪನ್ಯಾಸಕಿ ಬಿಂದು ನಾಯರ್ ಅವರಿಂದ ಉಪನ್ಯಾಸ, ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಎಂ. ಬಾಹುಬಲಿ ಪ್ರಸಾದ್, ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ ಆಚಾರ್ಯ, ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕ ಬಿ.ಕೆ.ಸಲೀಂ ಅತಿಥಿಗಳಾಗಿದ್ದಾರೆ.

ಇದೀಗ 63ವರ್ಷಕ್ಕೆ ಪಾದಾರ್ಪಣೆಗೊಂಡಿರುವ ಬೆಳುವಾಯಿ ಸಿ.ಎ.ಬ್ಯಾಂಕ್ ಬೆಳುವಾಯಿಯಲ್ಲಿ ಪ್ರಧಾನ ಶಾಖೆ, ಕೆಸರುಗದ್ದೆ, ಮೂಡುಮಾರ್ನಾಡು, ಧರೆಗುಡ್ಡೆಯಲ್ಲಿ ಶಾಖೆಗಳನ್ನು ಹೊಂದಿದೆ. ಕಳೆದ ಸಾಲಿನಲ್ಲಿ 196 ಕೋಟಿ ರೂ ವ್ಯವಹಾರ ನಡೆಸಿ 1.85 ಕೋಟಿ ಲಾಭ ದಾಖಲಿಸಿದೆ ಎಂದು ಭಾಸ್ಕರ ಎಸ್.ಕೋಟ್ಯಾನ್ ಹೇಳಿದರು.

ಜಿಲ್ಲಾ ಸಹಕಾರಿ ಸಪ್ತಾಹವು ಮಂಗಳೂರಿನ ಹಾಲು ಒಕ್ಕೂಟದ ಆವರಣದಲ್ಲಿ ನ14ರಂದು ಆರಂಭವಾಗಿ ಬೆಳ್ತಂಗಡಿ, ಮುಡಿಪು, ಸುಳ್ಯ, ಪುತ್ತೂರು, ಬೆಳುವಾಯಿ, ಬಳಿಕ ನ20ರಂದು ಮಂಗಳೂರಿನಲ್ಲಿ ಸಹಕಾರಿ ನಡಿಗೆಯೊಂದಿಗೆ ಕೊನೆಗೊಳ್ಳಲಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಎಂ. ಬಾಹುಬಲಿ ಪ್ರಸಾದ್ ಹೇಳಿದರು. ಬೆಳುವಾಯಿ ಸಿ.ಎ.ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಎಸ್.ಪಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News