ಸಾಮುದಾಯಿಕ ಸಮ್ಮೇಳನ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ

Update: 2018-11-12 16:35 GMT

ಮಂಗಳೂರು, ನ.12: ಕೆಸಿಎಫ್, ಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್ ಇವುಗಳ ಆಶ್ರಯದಲ್ಲಿ ಡಿ.3ರಂದು ನೆಹರೂ ಮೈದಾನದಲ್ಲಿ ನಡೆಯಲಿರುವ ಸಾಮು ದಾಯಿಕ ಸಮ್ಮೇಳನದ ಪ್ರಯುಕ್ತ ನಗರದ ಹಂಪನಕಟ್ಟೆ ಬಳಿಯ ಖಝಾನ ಜುವೆಲ್ಲರ್ ಬಳಿ ಸ್ವಾಗತ ಸಮಿತಿ ಕಚೇರಿಯನ್ನು ಸೋಮವಾರ ಉದ್ಘಾಟಿಸಲಾಯಿತು.

ಸುನ್ನಿ ಸಂಘಟನೆಗಳ ಒಕ್ಕೂಟದ ಕನ್ವಿನರ್ ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ನ ಕಚೇರಿ ಉದ್ಘಾಟಿಸಿ ಮಾತನಾಡಿ, ಸುನ್ನಿ ಒಕ್ಕೂಟದ ನಡುವೆ ಐಕ್ಯ ಸೃಷ್ಟಿಸುವ ಉದ್ದೇಶದಿಂದ ಹಾಗೂ 11 ಜೋಡಿಗಳ ಆದರ್ಶ ವಿವಾಹ, ಮೀಲಾದ್ ಜಾಥಾ, ಹುಬ್ಬುರ್ರಸೂಲ್ ಕಾನ್ಫರೆನ್ಸ್ ಆಚರಿಸುವ ಉದ್ದೇಶದಿಂದ ಸಾಮುದಾಯಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸುನ್ನತ್ ಜಮಾಅತ್ ಮಧ್ಯೆ ಏಕತೆ ಸೃಷ್ಟಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು, ಕಾರ್ಯದರ್ಶಿ ಅಬ್ದುಲ್ ರಝಾಕ್ ನಾಟೆಕಲ್, ಕೆಇ. ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಸ್ವಾಗತ ಸಮಿತಿ ಸಂಚಾಲಕ ಅಶ್ರಫ್ ಕಿನಾರ, ಸಲೀಂ ಕನ್ಯಾಡಿ, ಕೆಸಿಎಫ್ ನಾಯಕ ಅಶ್ರು ಬಜ್ಪೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News