ಮತದಾರ ಪಟ್ಟಿ ವೀಕ್ಷಕರಾಗಿ ಅಜಯ್ ಶೇಠ್
Update: 2018-11-13 19:50 IST
ಉಡುಪಿ, ನ.13: ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ಪರಿಶೀಲನೆ ನಡೆಸಲು ಮತದಾರ ಪಟ್ಟಿಯ ವೀಕ್ಷಕರಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಶೇಠ್‌ರನ್ನು ನೇಮಿಸಿದೆ.
ಅದರಂತೆ ಶೇಠ್ ಅವರು ನ.15ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯ ನಡೆಸಲಿದ್ದಾರೆ. ಈ ಸಂಬಂಧ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಯಾವುದಾದರೂ ದೂರುಗಳಿದ್ದಲ್ಲಿ ನ.15ರಂದು ಸಂಜೆ 4:30ಕ್ಕೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಖುದ್ಧು ಭೇಟಿ ನೀಡಿ ಚುನಾವಣಾ ವೀಕ್ಷಕರಿಗೆ ಲಿಖಿತ ದೂರು-ಮನವಿ ಸಲ್ಲಿಸಬಹುದು ಎಂದು ಉಡುಪಿ ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.