ಉಡುಪಿ:ಎಸ್‌ಎಲ್‌ಆರ್‌ಎಂ ಘಟಕಗಳಿಗೆ ಪ. ಬಂಗಾಳ ತಂಡ ಭೇಟಿ

Update: 2018-11-13 14:23 GMT

ಉಡುಪಿ, ನ.13: ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನ ಗೊಂಡಿರುವ ಘನ, ದ್ರವ ಸಂಪನ್ಮೂಲ ನಿರ್ವಹಣೆ (ಎಸ್‌ಎಲ್‌ಆರ್‌ಎಂ) ಯೋಜನೆ ಕುರಿತು ಮಾಹಿತಿ ಪಡೆಯಲು ಹಾಗೂ ಬೇರೆ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ಪೂರಕವಾಗಿ ತಿಳಿಸಲು ಪಶ್ಚಿಮ ಬಂಗಾಳದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ನಿಯೋಗವೊಂದು ಜಿಲ್ಲೆಯ ವಂಡ್ಸೆ, ಬ್ರಹ್ಮಾವರದ ವಾರಂಬಳ್ಳಿ ಹಾಗೂ ನಿಟ್ಟೆಯಲ್ಲಿ ಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಎಸ್.ವಿ. ಮುಖರ್ಜಿ, ಉಡುಪಿ ಜಿಲ್ಲೆಯ ಘನ- ದ್ರವ ತ್ಯಾಜ್ಯದ ನಿರ್ವಹಣೆಯು ಇಡೀ ದೇಶಕ್ಕೆ ಮಾದರಿಯಾಗಿದೆ. ನೈಸರ್ಗಿಕವಾದ ವಿಧಾನದ ಮೂಲಕ ಆದಾಯ ಹಾಗೂ ಉದ್ಯೋಗ ಸೃಜನೆ ಮಾಡುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.

ಈ ಉಡುಪಿಜಿಲ್ಲೆಯಘನ-ದ್ರವತ್ಯಾಜ್ಯದನಿರ್ವಹಣೆಯುಇಡೀದೇಶಕ್ಕೆಮಾದರಿಯಾಗಿದೆ.ನೈಸರ್ಗಿಕವಾದವಿಾನದ ಮೂಲಕ ಆದಾಯ ಹಾಗೂ ಉದ್ಯೋಗ ಸೃಜನೆ ಮಾಡುತ್ತಿರುವುದು ಪ್ರಶಂಸನೀಯವಾಗಿದೆ ಎಂದರು. ಪ್ರಸ್ತುತ ಘನ- ದ್ರವ ತ್ಯಾಜ್ಯದ ನಿರ್ವಹಣೆ ಇಡೀ ದೇಶಕ್ಕೆ ದೊಡ್ಡ ಸವಾಲಾಗಿದ್ದು, ಉಡುಪಿ ಮಾದರಿಯ ಅನುಷ್ಠಾನ ಹೆಚ್ಚಿನ ಆದ್ಯತೆ ಪಡೆಯಲಿದೆ ಹಾಗೂ ಈ ಪ್ರಯತ್ನಕ್ಕೆ ಮುಂದಾಗಿರುವ ಉಡುಪಿ ಜಿಲ್ಲಾಡಳಿತದ ಕ್ರಮ ಅಭಿನಂದನೀಯ ಎಂದು ಮುಖರ್ಜಿ ತಿಳಿಸಿದರು.

ಮಂಡಳಿಯ ಅಧಿಕಾರಿಗಳು, ಪರಿಸರ ಇಲಾಖೆಯ ಲಕ್ಷ್ಮೀಕಾಂತ್, ನಗರಸಭೆ ಪರಿಸರ ಅಭಿಯಂತರ ರಾಘವೇಂದ್ರ, ಕಾಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ವಂಡ್ಸೆ ಗ್ರಾಪಂ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನವೀನ್‌ಚಂದ್ರ ನಾಯಕ್, ಎಸ್‌ಎಲ್‌ಆರ್‌ಎಂ ಮೇಲ್ವಿಚಾರಕರು, ಗ್ರಾಪಂ ಸದಸ್ಯರು ಹಾಗೂ ಎಸ್‌ಎಲ್‌ಆರ್‌ಎಂ ಕಾರ್ಯಕರ್ತ ರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News