ಬುಡಕಟ್ಟು ಅಭ್ಯರ್ಥಿಗಳಿಗೆ ಪೊಲೀಸ್ ಹುದ್ದೆಗೆ ನೇಮಕಾತಿಯಲ್ಲಿ ವಿನಾಯಿತಿ

Update: 2018-11-13 14:35 GMT

ಉಡುಪಿ, ನ.13: ಪೊಲೀಸ್ ಇಲಾಖೆಯಲ್ಲಿ ಸಿವಿಲ್/ ಸಶಸ್ತ್ರ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಯಲ್ಲಿ ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯಗಳ ಅಭ್ಯರ್ಥಿಗಳಿಗೆ (ಸಿದ್ದಿಗರು, ಜೇನುಕುರುಬ, ಕಾಡುಕುರುಬ, ಯೆರವ, ಸೋಲಿಗ, ಕುಡಿಯ, ಗೌಡ್ಲು, ಹಸಲರು, ಮಲೆಕುಡಿಯ ಮತ್ತು ಕೊರಗ ಬುಡಕಟ್ಟು ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳು) ವಿನಾಯಿತಿಯನ್ನು ನೀಡಲಾಗುತ್ತಿದೆ.

ಇವರ ನೇಮಕಾತಿಗೆ ಗರಿಷ್ಟ ವಯೋಮಿತಿ 30 ವರ್ಷ. ದೇಹದಾರ್ಢ್ಯತೆ ಪರೀಕ್ಷೆ ವೇಳೆ ಪುರುಷ ಅ್ಯರ್ಥಿಗಳಿಗೆ ಎತ್ತರ 155 ಸೆ.ಮೀ ಮತ್ತು ಎದೆಯ ಸುತ್ತಳತೆ 75 ಸೆಂ.ಮೀ. ನಿಗದಿಪಡಿಸಲಾಗಿದೆ. ಮಹಿಳಾ ಅ್ಯರ್ಥಿಗಳಿಗೆ ಎತ್ತರ 150 ಸೆಂ.ಮೀ. ಮತ್ತು 45 ಕೆ.ಜಿ.ಗೆ ಕಡಿಮೆ ಇಲ್ಲದಂತೆ ತೂಕವನ್ನು ನಿಗದಿ ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News