ಕ್ಯಾಲಿಫೋರ್ನಿಯ ಕಾಡ್ಗಿಚ್ಚು: ಮೃತರ ಸಂಖ್ಯೆ 42ಕ್ಕೇರಿಕೆ

Update: 2018-11-13 14:40 GMT

ಕ್ಯಾಲಿಫೋರ್ನಿಯ, ನ. 13: ಉತ್ತರ ಕ್ಯಾಲಿಫೋರ್ನಿಯದ ಕಾಡ್ಗಿಚ್ಚಿನಿಂದ ಅತಿಹೆಚ್ಚು ಬಾಧೆಗೊಳಗಾಗಿರುವ ಪ್ಯಾರಡೈಸ್ ಪಟ್ಟಣದಲ್ಲಿ ಕನಿಷ್ಠ 42 ವ್ಯಕ್ತಿಗಳ ಅವಶೇಷಗಳನ್ನು ಶೋಧ ತಂಡಗಳು ಪತ್ತೆಹಚ್ಚಿವೆ.

ಇದರೊಂದಿಗೆ ಈ ಕಾಡ್ಗಿಚ್ಚು ಕ್ಯಾಲಿಫೋರ್ನಿಯ ರಾಜ್ಯದ ಇತಿಹಾಸದಲ್ಲೇ ಅತಿ ಭೀಕರ ಕಾಡ್ಗಿಚ್ಚಾಗಿ ದಾಖಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಸಮೀಪದ ನಗರ ಶಿಕೊದಲ್ಲಿ ಸೋಮವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಬಟ್ ಕೌಂಟಿಯ ಶೆರಿಫ್ ಕಾರಿ ಹೋನಿಯ ಸಾವು-ನೋವಿನ ನೂತನ ಸಂಖ್ಯೆಯನ್ನು ಪ್ರಕಟಿಸಿದರು.

ಬಟ್ ಕೌಂಟಿಯ ಸಿಯಾರ ಬೆಟ್ಟದ ತಪ್ಪಲಿನಲ್ಲಿ ಗುರುವಾರ ಆರಂಭಗೊಂಡ ಬೆಂಕಿ 7,100ಕ್ಕೂ ಅಧಿಕ ಮನೆಗಳು ಮತ್ತು ಅಂಗಡಿಗಳನ್ನು ಸುಟ್ಟು ಹಾಕಿದೆ. ಈ ಮೂಲಕ ಈ ಕಾಡ್ಗಿಚ್ಚು ಈಗಾಗಲೇ ರಾಜ್ಯದ ಅತ್ಯಂತ ವಿನಾಶಕಾರಿ ಕಾಡ್ಗಿಚ್ಚಾಗಿ ದಾಖಲಾಗಿದೆ.

ಕಾಡ್ಗಿಚ್ಚಿನ ಬಳಿಕ ನಾಪತ್ತೆಯಾದವರ ಸಂಖ್ಯೆ ಅಧಿಕೃತವಾಗಿ 228 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News