ಅನುಮಾನಸ್ಪದ ಸಾವು: ದೂರು

Update: 2018-11-13 15:54 GMT

ಕಾರ್ಕಳ, ನ.13: ಮಿಯ್ಯರು ಗ್ರಾಮದ ಬೋರ್ಕಟ್ಟೆ ಎಂಬಲ್ಲಿರುವ ಬಾವಿ ಯಲ್ಲಿ ವ್ಯಕ್ತಿಯೊಬ್ಬರ ಮೃತದೇಹವು ನ.12ರಂದು ಪತ್ತೆಯಾಗಿದ್ದು, ಇವರ ಸಾವಿನಲ್ಲಿ ಸಂಶಯ ಇರುವುದಾಗಿ ಸಹೋದರ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಬೋರ್ಕಟ್ಟೆ ಕರಿಯಕಲ್ಲು ನಿವಾಸಿ ಇನಾಸ್ ಮೋರಾಸ್ ಎಂಬವರ ಮಗ ಫ್ರಾನ್ಸಿಸ್ ಮೋರಾಸ್(48) ಎಂದು ಗುರುತಿಸಲಾಗಿದೆ. ವೀಪರಿತ ಮಧ್ಯಪಾನ ಮಾಡುವ ಅಭ್ಯಾಸವನ್ನು ಹೊಂದಿದ್ದ ಇವರು ನ.7ರಿಂದ ನ.12ರ ಮಧ್ಯಾವಧಿಯಲ್ಲಿ ಮನೆಗೆ ನಡೆದುಕೊಂಡು ಹೋಗುವಾಗ ದಾರಿಯ ಬದಿ ಯಲ್ಲಿರುವ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಆದರೆ ಸಹೋದರ ಸುನೀಲ್ ಮೋರಸ್ ಇವರ ಮರಣದ ಬಗ್ಗೆ ಸಂಶಯವಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News