ಅಕ್ರಮ ಸಾಗಾಟ: ಐದು ಜಾನುವಾರುಗಳು ವಶ

Update: 2018-11-13 15:56 GMT

ಕೊಲ್ಲೂರು, ನ.13: ಮಹೇಂದ್ರ ಬೊಲೇರೋ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಐದು ಜಾನುವಾರುಗಳನ್ನು ಕೊಲ್ಲೂರು ಪೊಲೀಸರು ನ.13ರಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಕೆರಾಡಿ ಹಾಡಿಬರ್ಗಿ ಎಂಬಲ್ಲಿ ವಶಪಡಿಸಿ ಕೊಂಡಿದ್ದಾರೆ.

ಕೆರಾಡಿ ಕಡೆಯಿಂದ ಬೆಳ್ಳಾಲ ಕಡೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಹೇಂದ್ರ ಬೊಲೇರೋ ವಾಹನವನ್ನು ಪೊಲೀಸರು ಕೆರಾಡಿಯಲ್ಲಿ ನಿಲ್ಲಿಸು ವಂತೆ ಸೂಚಿಸಿದರು. ಆದರೆ ಚಾಲಕ ವಾಹನವನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದು, ಪೊಲೀಸರು ಅದನ್ನು ಬೆನ್ನಟ್ಟಿದಾಗ ಚಾಲಕ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಪರಾರಿಯಾದನು.

ಬಳಿಕ ಪೊಲೀಸರು 4 ಲಕ್ಷ ರೂ. ಮೌಲ್ಯದ ವಾಹನ ಹಾಗೂ ಅದರಲ್ಲಿದ್ದ ಒಟ್ಟು 15 ಸಾವಿರ ರೂ. ಮೌಲ್ಯದ ಒಂದು ದನ, ಎರಡು ಹೆಣ್ಣು ಕರು, ಎರಡು ಗಂಡು ಕರುಗಳನ್ನು ವಶಪಡಿಸಿಕೊಂಡರು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News