ಮಣಿಪಾಲ: ಮಾಹೆಯ ಪ್ರಾಧ್ಯಾಪಕಿಗೆ ಅಂ.ರಾ.ಪ್ರಶಸ್ತಿ

Update: 2018-11-13 16:38 GMT

ಮಣಿಪಾಲ, ನ.13: ಮಣಿಪಾಲ ಮಾಹೆಯ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಎಂಎಚ್‌ಎ ಕಾರ್ಯಕ್ರಮದ ಸಹಾಯಕ ಪ್ರಾಧ್ಯಾಪಕಿ ಉಷಾ ರಾಣಿ ಅವರು ಆರೋಗ್ಯ ಸಾಕ್ಷರತಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಪ್ರತಿಷ್ಠಿತ ‘ಯುಫಾಂಗ್ ಇಂಟರ್‌ನೇಷನಲ್ ಹೆಲ್ತ್ ಲಿಟರಸಿ ಎವಾಡ್ 2018’ನ್ನು ಪಡೆದಿದ್ದಾರೆ.

ತೈವಾನ್‌ನ ಥಾಯ್‌ಚುಂಗ್‌ನಲ್ಲಿ ಕಳೆದ ತಿಂಗಳ ಕೊನೆಯಲ್ಲಿ ನಡೆದ ಏಷ್ಯನ್ ಹೆಲ್ತ್ ಲಿಟರಸಿ ಅಸೋಸಿಯೇಷನ್‌ನ (ಎಎಚ್‌ಎಲ್‌ಎ) ಆರನೇ ವಾರ್ಷಿಕ ಅಂತಾರಾಷ್ಟ್ರೀಯ ಆರೋಗ್ಯ ಸಾಕ್ಷರತಾ ಸಮ್ಮೇಳನದಲ್ಲಿ ಸ್ವಿಝರ್‌ಲಂಡ್ ಜಿನಿವಾದ ಎಎಚ್‌ಎಲ್‌ಎ ಪ್ರಧಾನ ಕಾರ್ಯದರ್ಶಿ ಡಾ.ಪೀಟರ್ ಚಾಂಗ್‌ರಿಂದ ಸ್ವೀಕರಿಸಿದರು.

ಪ್ರಶಸ್ತಿಯು 500 ಡಾಲರ್ ನಗದು ಹಾಗೂ ಸರ್ಟಿಫಿಕೇಟ್‌ನ್ನು ಹೊಂದಿದೆ. ಆರೋಗ್ಯ ಸಾಕ್ಷರತಾ ಕ್ಷೇತ್ರದಲ್ಲಿ ನಡೆಸುವ ಅತ್ಯುತ್ತಮ ಸಂಶೋಧನೆಯ ಆಧಾರದಲ್ಲಿ ಸಂಶೋಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆರೋಗ್ಯ ಸಾಕ್ಷರತೆಯಲ್ಲಿ ಸಂಶೋಧನೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹಾಗೂ ಸಮುದಾಯಗಳಲ್ಲಿ ಪ್ರೋತ್ಸಾಹ ನೀಡುವುದು ಈ ಪ್ರಶಸ್ತಿಯ ಉದ್ದೇಶ ವಾಗಿದೆ ಎಂದು ಮಾಹೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News