ಭಾರತದಲ್ಲಿ 14,500 ಕೋಟಿ ರೂ. ಹೂಡಿರುವ ಚೀನಿ ಕಂಪೆನಿಗಳು

Update: 2018-11-13 16:47 GMT

ಬೀಜಿಂಗ್, ನ. 13: ಚೀನಾದ ಕಂಪೆನಿಗಳು 2017ರಲ್ಲಿ ಹೊಸ ಭಾರತೀಯ ಉದ್ಯಮಗಳಲ್ಲಿ ಸುಮಾರು 2 ಬಿಲಿಯ ಡಾಲರ್ (ಸುಮಾರು 14,500 ಕೋಟಿ ರೂಪಾಯಿ) ಹೂಡಿಕೆ ಮಾಡಿವೆ.

ಇದು ಹಿಂದಿನ ವರ್ಷಗಳಿಗಿಂತ ತುಂಬಾ ಹೆಚ್ಚಾಗಿದೆ. ಭಾರತದ ವಿಸ್ತರಿಸುತ್ತಿರುವ ಮಾರುಕಟ್ಟೆ, ಅಗ್ಗದ ಕಾರ್ಮಿಕ ಶಕ್ತಿ ಮತ್ತು ಕಡಿಮೆ ಅಸ್ಥಿರತೆಯ ಪ್ರಯೋಜನವನ್ನು ಪಡೆಯಲು ಚೀನಿ ಉದ್ಯಮಗಳು ಭಾರತದತ್ತ ಹೊರಳಿರುವುದನ್ನು ಇದು ತೋರಿಸಿದೆ ಎಂದು ಕೆಪಿಎಂಜಿ ವರದಿಯೊಂದು ಹೇಳಿದೆ.

ಬೀಜಿಂಗ್‌ನಲ್ಲಿ ಸೋಮವಾರ ನಡೆದ ‘2ನೇ ಸ್ಟಾರ್ಟಪ್ ಇಂಡಿಯ ಇನ್ವೆಸ್ಟ್‌ಮೆಂಟ್’ ವಿಚಾರಸಂಕಿರಣದಲ್ಲಿ ವರದಿಯನ್ನು ಬಿಡುಗಡೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News