ಕುತ್ಪಾಡಿ ಎಸ್‌ಡಿಎಂನಲ್ಲಿ ಆಯುರ್ವೇದ ದಿನಾಚರಣೆ

Update: 2018-11-13 16:47 GMT

ಉಡುಪಿ, ನ.13: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜಿನ ಕಾಯಚಿಕಿತ್ಸಾ ಹಾಗೂ ಮಾನಸರೋಗ ವಿಭಾಗದ ವತಿ ಯಿಂದ ಆಯುರ್ವೇದ ದಿನಾಚರಣೆಯನ್ನು ಇತ್ತೀಚೆಗೆ ಕಾಲೇಜಿನ ಭಾವ ಪ್ರಕಾಶ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ, ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ., ಸ್ನಾತಕೋತ್ತರ ವಿಭಾಗದ ಕುಲಪತಿ ಡಾ.ನಿರಂಜನ್ ರಾವ್, ಕಾಯಚಿಕಿತ್ಸಾ-ಮಾನಸರೋಗ ವಿಭಾಗದ ಮುಖ್ಯಸ್ಥೆ ಡಾ.ಶಿ್ರೀಲತಾ ಕಾಮತ್ ಉಪಸ್ಥಿತರಿದ್ದರು.

ವಿಭಾಗದ ಸಹಪ್ರಾಧ್ಯಾಪಕ ಡಾ.ನಿಶಾಂತ್ ಪೈ ‘ವರ್ತಮಾನದ ಆಯು ರ್ವೇದ ಚಿಕಿತ್ಸಾ ಕ್ರಮದಲ್ಲಿ ರಾಸಾಯನ ಚಿಕಿತ್ಸೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಡಾ.ವಿಜಯೇಂದ್ರ ಭಟ್ ಕಾರ್ಯಕ್ರಮ ಸಂಯೋಜಿಸಿ ದರು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ದೀಾ ಶೆಟ್ಟಿಗೆ ಬಹುಮಾನ ನೀಡಲಾಯಿತು.

ಡಾ.ಅನಿರುದ್ಧ ಸರಳಾಯ ಸ್ವಾಗತಿಸಿದರು. ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಸುಮೇಶ್ ಪೈ ಹಾಗೂ ಡಾ.ಅಶ್ವಿನಿ ರಾಮಚಂದ್ರ ಕಾರ್ಯಕ್ರಮ ನಿರೂ ಪಿಸಿದರು. ಡಾ.ಶೈಲೇಶ್ ವೈ.ಆಚಾರ್ಯ ವಂದಿಸಿದರು.

ರಾಷ್ಟ್ರೀಯ ಆಯುರ್ವೇದ ಸಪ್ತಾಹದ ಪ್ರಯುಕ್ತ ಉಡುಪಿ ಸಂತ ಮೇರಿಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಭಾಗದ ವತಿಯಿಂದ ಆರೋಗ್ಯ ರಕ್ಷಣೆಯ ರಹಸ್ಯಗಳು ಎಂಬ ವಿಷಯದ ಕುರಿತು ಡಾ. ಧನೇಶ್ವರಿ ಎಚ್.ಎ. ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News