ನ.17: ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

Update: 2018-11-13 16:52 GMT

ಉಡುಪಿ, ನ.13: ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಚರ್ಚ್‌ನ ಸಾರ್ವ ಜನಿಕರ ಅನುಕೂಲಕ್ಕೆ ನಿರ್ಮಿಸಲಾಗುತ್ತಿರುವ ನೂತನ ಲಾರೆನ್ಸ್ ಸಮುದಾಯ ಭವನದ ಸಹಾಯರ್ಥವಾಗಿ ‘ಲಾರೆನ್ಸಿಯನ್’ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ನ.17ರಂದು ಸಂಜೆ 7:30ಕ್ಕೆ ಆಯೋಜಿಸಲಾಗಿದೆ.

ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ರಾಜ್ಯಮಟ್ಟದ ತಂಡಗಳು ಹಾಗೂ ಪ್ರಸಿದ್ಧ ಆಟಗಾರರು ಭಾಗವಹಿಸಲಿರುವರು ಎಂದು ಚರ್ಚಿನ ಸಹಾಯಕ ಧರ್ಮ ಗುರು ಹಾಗೂ ಪಂದ್ಯಾವಳಿ ಸಂಚಾಲಕ ಫಾ.ಲಾರೆನ್ಸ್ ಕುಟಿನ್ಹೊ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದರು.

ಮೂಡಬಿದ್ರೆ ಆಳ್ವಾಸ್, ಮೈಸೂರು ವಿವಿ, ಕುಂದಾಪುರ ಚಂದನ್ ಚೇತನ್, ಸಮೀರ್ ಟೀಮ್, ಸರ್ಫರಾಜ್ ಸ್ಟೇಡಿಯಂ ಫ್ರೆಂಡ್ಸ್, ಮಂಗಳೂರು ಫ್ರೆಂಡ್ಸ್, ಚಿನ್ನ ಟೀಮ್, ಶಿವಮೊಗ್ಗ ಮಿಕ್ಸ್, ಕಟೀಲ್ ಟೀಮ್, ಕೋಲಾರ ತಂಡಗಳು ಪಾಲ್ಗೊಳ್ಳಲಿವೆ. ಚಾಂಪಿಯನ್ ಪ್ರಶಸ್ತಿ ವಿಜೇತ ತಂಡಕ್ಕೆ 50ಸಾವಿರ ರೂ., ಪ್ರಥಮ ರನ್ನರ್ ಅಪ್ ತಂಡಕ್ಕೆ 30ಸಾವಿರ ರೂ., ದ್ವಿತೀಯ 20ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು. ಅತ್ಯುತ್ತಮ ಐದು ಮಂದಿ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನೌಕಸೇನೆಯ ನಿವೃತ್ತ ಅಧಿಕಾರಿ ಕಮಾಡೋರ್ ಜೆರೋಮ್ ಕ್ಯಾಸ್ತಲಿನೊ, ಫಾ.ಮಹೇಶ್ ಡಿಸೋಜ, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಜಾಯ್ಲಿನ್ ಮುರೆಲ್ ಲೋಬೊ, ರೈಸನ್ ಬೆರ್ನೆಟ್ ರೆಬೆಲ್ಲೊ ಭಾಗವಹಿಸಲಿರುವರು.

ಸುದ್ದಿಗೋಷ್ಠಿಯಲ್ಲಿ ಚರ್ಚ್‌ನ ಪ್ರಧಾನ ಧರ್ಮಗುರು ಫಾ.ಕ್ಲೇಮಂಟ್ ಮಸ್ಕರೇನಸ್, ವಿನ್ಸೆಂಟ್ ಫೆರ್ನಾಂಡಿಸ್, ವಿಕ್ಟರ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News