ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ; ‘ಸೌರಭ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನ

Update: 2018-11-13 17:12 GMT

ಮಂಗಳೂರು, ನ.13: ಕಥಾಬಿಂದು ಸಾಂಸ್ಕೃತಿಕ ವೇದಕೆಯಿಂದ ಧರ್ಮದರ್ಶಿ ಹರಿಕೃಷ್ಣ ಪುನರೂರು 75ರ ಸಂಭ್ರಮ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ‘ಸೌರಭ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನ.15ರಂದು ಸಂಜೆ 4 ಗಂಟೆಗೆ ನಗರದ ಮಂಗಳಾದೇವಿ ದೇವಸ್ಥಾನದ ರಂಗಮಂದಿರ ದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಂಗಳಾದೇವಿ ದೇವಸ್ಥಾನ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಉದ್ಘಾಟಿಸಲಿದ್ದಾರೆ. ಮುಂಬೈನ ಸಮಾಜ ಸೇವಕಿ ಪ್ರಭಾ ಎನ್. ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿಂದಿ ಲೇಖಕ ಪದ್ಮಭೂಷಣ ಡಾ.ವೃಂದಾವನ್‌ಲಾಲ್ ವರ್ಮಜಾಂತಿ ಅವರ ಕನ್ನಡ ಅನುವಾದದ ‘ಕಾಂತಿಮತಿ’ ಕೆ.ಲಕ್ಷ್ಮೀ ಅವರ ಕೃತಿಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಲೋಕಾರ್ಪಣೆಗೊಳಿಸಲಿದ್ದಾರೆ.

ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ 75ನೇ ವರ್ಷದ ಅಂಗವಾಗಿ ವೇದಿಕೆಯಿಂದ ಗೌರವಿಸಲಾಗುತ್ತದೆ. ಆನಂತರ ಹರಿಶ್ಚಂದ್ರ ಸಾಲಿಯಾನ್ (ಸಮಾಜ ಸೇವೆ), ಕಸ್ತೂರಿ (ಅಂಧ ಗಾಯನ ಕಲಾವಿದೆ), ವಸಂತ್ ರಾವ್ (ಸಮಾಜ ಸೇವೆ), ಪಿ.ವಿ.ಮಲ್ಲಿಕಾರ್ಜುನಯ್ಯ (ಕೃಷಿ), ಜಯರಾಮ್ ಉಡುಪ (ಧಾರ್ಮಿಕ), ಲಕ್ಷ್ಮಣ ಗೌಡ (ಜೇನುಕೃಷಿ), ಜಿ.ಎಸ್.ನಾಯಕ್ (ಸಮಾಜ ಸೇವೆ), ಚಂದ್ರಹಾಸ ಚಾರ್ಮಾಡಿ (ಪತ್ರಿಕೋದ್ಯಮ), ಡಾ.ರಜನಿ ಪೈ (ಸಮಾಜ ಸೇವೆ), ಸುಮಾಲಿನಿ ರಾಮಾಚಾರಿ (ಸಮಾಜ ಸೇವೆ), ಎ.ಎಸ್.ಪದ್ಮಾವತಿ ಸಚ್ಚಿತಾನಂದ ಗುಪ್ತ (ಕಲಾ ಕ್ಷೇತ್ರ), ಆಶಾ ಬದರೀನಾಥ್ (ಸುಗಮ ಸಂಗೀತ), ರಮೇಶ್ ಆರ್. (ಸಮಾಜ ಸೇವೆ), ಕೇಶವ ಶಕ್ತಿನಗರ (ಯಕ್ಷಗಾನ), ಶಿವರಾಜ ಪುತ್ತೂರು (ಸ್ಯಾಕ್ಸೋಫೋನ್) ಜಯರಾಮ್ (ಸ್ಯಾಕ್ಸೋಫೋನ್), ದೇವಿ ಪ್ರಸಾದ್ ಕನತ್ತೂರು (ವೈದ್ಯಕೀಯ), ಭೂಮಿಕ ಪ್ರಿಯದರ್ಶಿನಿ (ಬಹುಮುಖ ಪ್ರತಿಭೆ), ರಾಜ್ಯದ ವಿವಿಧ ಜಿಲ್ಲೆಗಳಿಂದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ‘ಸೌರಭ ರತ್ನ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಪಿ.ವಿ. ಪ್ರದೀಪ್‌ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News