ಚಿಕ್ಕಮಗಳೂರು: ಚಿಕಿತ್ಸೆಗಾಗಿ ಸಹಾಯಹಸ್ತಕ್ಕೆ ಮನವಿ

Update: 2018-11-13 17:56 GMT

ಮಂಗಳೂರು, ನ.13: ಪತಿಯಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬ್ಯಾರಿ ಸಮುದಾಯದ ಜಮೀಲಾಬಾನು ಅವರಿಗೆ ಸರ್ಜರಿ ಚಿಕಿತ್ಸೆಗೆ ಲಕ್ಷಾಂತರ ರೂ. ತುರ್ತು ಅಗತ್ಯವಿದ್ದು, ಸಹಾಯಹಸ್ತಕ್ಕೆ ಮನವಿ ಮಾಡಲಾಗಿದೆ.

ಜಮೀಲಾಬಾನು ಅವರನ್ನು 18 ವರ್ಷಗಳ ಹಿಂದೆ ಶಿವಮೊಗ್ಗದ ಮೆಕ್ಯಾನಿಕ್ ಕಾಳ್ಯಾ ಇಸ್ಮಾಯೀಲ್ ಎಂಬಾತನ ಜೊತೆ ಮದುವೆ ಮಾಡಿಸಲಾಗಿತ್ತು. ಈತ ಆರಂಭದಿಂದಲೂ ಪತ್ನಿಗೆ ದೈಹಿಕ ಹಿಂಸೆ ನೀಡುತ್ತಿದ್ದ. ಜಮೀಲಾಬಾನು ಬಡತನದಿಂದಾಗಿ ಹಿಂಸೆಯನ್ನು ಸಹಿಸುತ್ತಾ ಆತನೊಂದಿಗೆ ಬಾಳುತ್ತಿದ್ದಳು.

ವಾರದ ಹಿಂದೆ ಇಸ್ಮಾಯೀಲ್ ಹಿಂಸೆ ಮಿತಿ ಮೀರಿದ್ದು, ಅತ್ಯಂತ ಕ್ರೂರವಾಗಿ ಜಮೀಲಾಬಾನು ಮೇಲೆ ಹಲ್ಲೆ ನಡೆಸಿದ್ದಾನೆ. ತಲೆಯನ್ನು ಗೋಡೆಗೆ ಜಜ್ಜಿ, ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಈ ಮಾರಕ ಹಲ್ಲೆಯಿಂದ ಜಮೀಲಾಬಾನು ಮಾರಣಾಂತಿಕವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ.
ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಜಮೀಲಾಬಾನು ಅವರಿಗೆ ಒಂದೆರಡು ಸರ್ಜರಿಗಳು ಈಗಾಗಲೇ ನಡೆದಿವೆ. ಇನ್ನೂ ಕನಿಷ್ಠ ಮೂರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿದ್ದು, ಕೆಲವು ಸರ್ಜರಿಗಳು ನಡೆಯಬೇಕಿದೆ.

ಹಲ್ಲೆಯ ನಂತರ ಪತಿ ಇಸ್ಮಾಯೀಲ್ ಜೈಲು ಸೇರಿದ್ದು, ಆತನ ಕುಟುಂಬ ಜಮೀಲಾ ಮತ್ತವರ ಮೂವರು ಮಕ್ಕಳನ್ನು ಕೈಬಿಟ್ಟಿದೆ. 10ನೇ ತರಗತಿ ಓದುತ್ತಿರುವ ಹೆಣ್ಣುಮಗಳು, ಆರನೇ ತರಗತಿಯಲ್ಲಿರುವ ಗಂಡು ಮಗ, ಅರ್ಧದಲ್ಲಿ ಶಿಕ್ಷಣ ತೊರೆದಿರುವ ಅಕ್ಕನ ಜೊತೆಗೆ ಜಮೀಲಾ ತವರು ಮನೆ ಸೇರಿದ್ದಾರೆ.

ಈಗಾಗಲೇ ಜಮೀಲಾಬಾನು ಚಿಕಿತ್ಸೆಗೆ ಮೂರು ಲಕ್ಷ ರೂ. ಖರ್ಚಾಗಿದ್ದು, ಕೂಲಿ ಕೆಲಸಕ್ಕೆ ಹೋಗುವ ಇಬ್ಬರು ಸಹೋದರರು ಸಾಲ ಮಾಡಿ ದಿಕ್ಕು ತೋಚದೆ ಕೂತಿದ್ದಾರೆ. ಮಾನವೀಯ ಕಳಕಳಿಯಿಂದ ಈ ಕುಟುಂಬಕ್ಕೆ ಸಹಾಯ ಒದಗಿಸುವ ಅಗತ್ಯವಿದೆ. 

ಜಮೀಲಾಬಾನು ಸಹೋದರ ಮೊಯ್ದಿನ್ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಬಹುದು. 

ಬ್ಯಾಂಕ್ ವಿವರ: Name: Moyiddin, Ac.No: 35578195945, IFSC: SBIN 0015059 ಹೆಚ್ಚಿನ ಮಾಹಿತಿಗಾಗಿ ಜಮೀಲಾಬಾನು ಸಹೋದರ ಮೊಯ್ದಿನ್ (9483473735) ಅವರನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News