ಗಾಂಜಾ ಸೇವನೆ: ಮೂವರ ಬಂಧನ

Update: 2018-11-13 17:59 GMT

ಮಂಗಳೂರು, ನ.13: ನಗರದ ಮಣ್ಣಗುಡ್ಡ ಜಂಕ್ಷನ್ ಬಳಿಯ ಸಾರ್ವಜನಿಕ ಮೈದಾನ ಪ್ರದೇಶದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಎಕನಾಮಿಕ್ ಮತ್ತು ನಾರ್ಕೊಟಿಕ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಅಳಕೆ ನಿವಾಸಿ ಲತೀಷ್ ನಾಯ್ಕ, ಹೊಯ್ಗೆಬೈಲ್ ನವನೀತ್ ನಾಯ್ಕೆ, ಉಳ್ಳಾಲ್‌ ಬೈಲ್ ಗೌತಮ್ ಬಂಧಿತರು. ಆರೋಪಿಗಳು ಗಾಂಜಾ ಸೇವನೆ ಮಾಡುತ್ತಿ ರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News