ತಮಿಳುನಾಡಿನಲ್ಲಿ ಹಂದಿಜ್ವರ ಹಾವಳಿ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

Update: 2018-11-14 15:10 GMT

ಮದುರೈ,ನ.14: ತಮಿಳುನಾಡಿನಾದ್ಯಂತ ಹಂದಿಜ್ವರದ ಹಾವಳಿ ತೀವ್ರವಾಗುತ್ತಿದ್ದು, ಬುಧವಾರ 12ರ ಹರೆಯದ ಬಾಲಕ ಕೊನೆಯುಸಿರೆಳೆದಿದ್ದಾನೆ. ಈ ಮೂಲಕ ಈ ಕಾಯಿಲೆಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನ ವಿರಿದುನಗರದ ಕರುಪ್ಪಸಾಮಿ ನಗರದ ನಿವಾಸಿ ಎ. ಆದಿಶಂಕರ ಎಂಬ ಬಾಲಕನನ್ನು ಸರಕಾರಿ ರಾಜಾಜಿ ಆಸ್ಪತ್ರೆಗೆ ರವಿವಾರ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಬಾಲಕ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಒಂದು ಮಗು ಸೇರಿದಂತೆ ಏಳು ಮಂದಿ ಹಂದಿಜ್ವರದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.

ಹಂದಿಜ್ವರದಿಂದ ಸೋಮವಾರ ಮತ್ತು ಮಂಗಳವಾರ ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಎರಡು ನಕಲಿ ಚುನಾವಣಾ ಆಯೋಗ ಖಾತೆಗಳನ್ನು ಅಮಾನತುಗೊಳಿಸಿದ ಟ್ವಿಟರ್

ಹೊಸದಿಲ್ಲಿ,ನ.14: ಭಾರತೀಯ ಚುನಾವಣಾ ಆಯೋಗದ ಹೆಸರಲ್ಲಿ ನಿರ್ವಹಿಸಲಾಗುತ್ತಿದ್ದ ಎರಡು ನಕಲಿ ಖಾತೆಗಳನ್ನು ಟ್ವಿಟ್ಟರ್ ಬುಧವಾರ ಅಮಾನತುಗೊಳಿಸಿದೆ. ಚುನಾವಣಾ ಆಯೋಗ ನೀಡಿದ ದೂರಿನ ಹಿನ್ನೆಲೆಯಲ್ಲಿ ಟ್ವಿಟ್ಟರ್ ಈ ಕ್ರಮವನ್ನು ತೆಗೆದುಕೊಂಡಿದೆ.

@ElectionComm @DalitFederation ಈ ಎರಡು ನಕಲಿ ಖಾತೆಗಳನ್ನು ಬಹಳಷ್ಟು ಮಂದಿ ಫಾಲೊ ಮಾಡುತ್ತಿದ್ದರು. ಒಂದು ಖಾತೆಯಂತೂ 4,751 ಫಾಲೊವರ್‌ಗಳನ್ನು ಹೊಂದಿತ್ತು. ಈ ಖಾತೆಯು ಚು.ಆಯೋಗದ ಚಿಹ್ನೆ ಮತ್ತು ಎಂಬ ಟ್ವಿಟರ್ ಹ್ಯಾಂಡಲನ್ನೂ ಬಳಸುತ್ತಿತ್ತು. ಇನ್ನೊಂದು ಖಾತೆಯು ಎಂಬ ಹ್ಯಾಂಡಲ್ ಬಳಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣಾ ಆಯೋಗ ತನ್ನದೇ ಆದ ಟ್ವಿಟರ್ ಖಾತೆಯನ್ನು ಹೊಂದಿಲ್ಲ ಎಂದು ಆಯೋಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇವುಗಳು ನಕಲಿ ಖಾತೆಗಳಾಗಿದ್ದು ಚುನಾವಣಾ ಆಯೋಗದ ಹೆಸರಲ್ಲಿ ನಿರ್ವಹಿಸಲಾಗುತ್ತಿತ್ತು. ಇವುಗಳು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದವು. ಆಯೋಗದ ಮಾಧ್ಯಮ ವಿಭಾಗವು ಈ ನಕಲಿ ಖಾತೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಟ್ವಿಟರ್‌ಗೆ ಮನವಿ ಮಾಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News