ಕೋಡಿ ಕಡಲ ಕಿನಾರೆಯಲ್ಲಿ ಬೂತಾಯಿ ಮೀನುಗಳ ಸುಗ್ಗಿ !

Update: 2018-11-14 17:52 GMT

ಕುಂದಾಪುರ, ನ. 14: ಕೋಡಿಯ ಕಡಲ ಕಿನಾರೆಯಲ್ಲಿ ಬುಧವಾರ ಬೆಳಗಿನ ಜಾವಾ ಕೈರಂಪಣಿ ಮೀನುಗಾರಿಕೆ ಬಲೆಗೆ ರಾಶಿ ರಾಶಿ ಬೂತಾಯಿ ಮೀನುಗಳು ದೊರೆತಿವೆ.

ಬೀಜಾಡಿಯ ಕರಾವಳಿ ಫ್ರೆಂಡ್ಸ್ ಎಂಬ ದೋಣಿಯವರು ಬೆಳಗ್ಗೆ 6.30ರ ಸುಮಾರಿಗೆ ಕೈರಂಪಣಿ ಬಲೆಯನ್ನು ಹಾಕಿದ್ದು, ಇದಕ್ಕೆ ಭಾರೀ ಪ್ರಮಾಣದ ಮೀನುಗಳು ಸಿಕ್ಕಿವೆ. ಸುಮಾರು 6,000 ಕೆ.ಜಿ.ಗೂ ಅಧಿಕ ಪ್ರಮಾಣದ ಮೀನು ಗಳು ಬಲೆಯ ಮೂಲಕ ದಡಕ್ಕೆ ಬಂದಿದ್ದು, ಅದರಲ್ಲಿ ಸುಮಾರು 3 ಸಾವಿರ ಮೀನುಗಳು ಇದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಸುದ್ದಿ ಕೋಡಿ ಪರಿಸರದಲ್ಲಿ ಹಬ್ಬುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಸ್ಥಳೀಯರು ತೀರದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದ ಮೀನುಗಳನ್ನು ಎಕ್ಕಲು ಮುಗಿಬಿದ್ದರು. ದೋಣಿಯ ಬಲೆಗೆ ಸಿಕ್ಕಿದ ಮೀನುಗಳನ್ನು ಕೋಟದ ಫಿಶ್‌ಮಿಲ್‌ಗೆ ನೀಡಲಾಗಿದ್ದು, ಉಳಿದ ಮೀನುಗಳನ್ನು ಸ್ಥಳೀಯರೆಲ್ಲ ಹಂಚಿ ಕೊಂಡಿದ್ದಾರೆ ಎನ್ನಲಾಗಿದೆ.

ಒಟ್ಟು ತಲಾ 40 ಕೆ.ಜಿ.ಯಂತೆ 54 ಬಾಕ್ಸ್ ಮೀನುಗಳನ್ನು ಮಾರಾಟ ಮಾಡಲಾಗಿದೆ. ಬಾಕ್ಸ್‌ವೊಂದಕ್ಕೆ 1 ಸಾವಿರ ರೂ. ದರ ನಿಗದಿ ಪಡಿಸಲಾಗಿತ್ತು. ದೋಣಿಯವರಿಗೆ ಸುಮಾರು 50ರಿಂದ 60 ಸಾವಿರ ರೂ. ದೊರೆತಿದ್ದು, ಒಟ್ಟು ಸುಮಾರು 1ರಿಂದ 1.25 ಲಕ್ಷ ರೂ. ಮೌಲ್ಯದ ಮೀನುಗಳಿದ್ದಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News