ಹಾಲು ಹಲ್ಲನ್ನು ನಿರ್ಲಕ್ಷಿಸದಿರಿ: ಡಾ.ಚೂಂತಾರು

Update: 2018-11-14 16:07 GMT

ಮಂಗಳೂರು, ನ.13: ಹಾಲು ಹಲ್ಲುಗಳು ಶಾಶ್ವತ ಹಲ್ಲಿನಷ್ಟೇ ಪ್ರಾಮುಖ್ಯತೆ ಹೊಂದಿದೆ. ಮಗುವಿನ ಮಾನಸಿಕ, ದೈಹಿಕ ಮತ್ತು ಸರ್ವತೋ ಮುಖ ಬೆಳವಣಿಗೆಗೆ ಹಾಲು ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯಕ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಮುರಲಿ ಮೋಹನ್ ಚೂಂತಾರು ಹೇಳಿದರು.

ಮಕ್ಕಳ ದಿನಾಚರಣೆ ಅಂಗವಾಗಿ ಚೂಂತಾರು ಸರೋಜಿನಿ ಪ್ರತಿಷ್ಠಾನದಿಂದ ಮೇರಿಹಿಲ್‌ನಲ್ಲಿನ ಇನ್‌ಫೆಂಟ್ ಜೀಸಸ್ ಹಿರಿಯ ಪ್ರಥಾಮಿಕ ಶಾಲೆಯಲ್ಲಿ ಮಕ್ಕಳಿಗೆ ದಂತ ಆರೋಗ್ಯ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸುಮಾರು 40 ಮಕ್ಕಳಿಗೆ ದಂತ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಿ ಉಚಿತವಾಗಿ ಟೂತ್‌ಪೇಸ್ಟ್, ಟೂತ್‌ಬ್ರಷ್ ಮತ್ತು ಮೌತ್‌ವಾಷ್‌ಗಳನ್ನು ವಿತರಿಸಲಾಯಿತು. ಎಲ್ಲ ಮಕ್ಕಳಿಗೆ ಸರಿಯಾಗಿ ಹಲ್ಲುಜ್ಜುವ ವಿಧಾನವನ್ನು ತಿಳಿಸಿ ಹೇಳಲಾಯಿತು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ವೆರೋನಿಕ, ಜೋಯ್ಸ ಡಿಕೋಸ್ಟ, ಸ್ಟೆಲ್ಲಾ, ಲೋಲಾಕ್ಷಿ, ಶೃತಿ ಮತ್ತು ಸಿಸ್ಟರ್ ಜಾನೆಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News